ರಮಝಾನ್ ಉಪವಾಸ ಹಿನ್ನೆಲೆ: ಯುಎಇಯಲ್ಲಿ ಸರ್ಕಾರಿ ನೌಕರರ ಕೆಲಸದ ಸಮಯದಲ್ಲಿ ಬದಲಾವಣೆ

Prasthutha|

ದುಬೈ: ರಮಝಾನ್ ತಿಂಗಳಲ್ಲಿ ಸಚಿವಾಲಯದ ಅಧಿಕಾರಿಗಳು ಮತ್ತು ಸರ್ಕಾರಿ ಸಿಬ್ಬಂದಿಗೆ ಅಧಿಕೃತ ಕೆಲಸದ ಸಮಯವನ್ನು ಪ್ರತ್ಯೇಕವಾಗಿ ನಿಗದಿಪಡಿಸಲಾಗಿದೆ.

- Advertisement -

ಎಪ್ರಿಲ್ 2ರಂದು ಈ ವರ್ಷದ ರಮಝಾನ್ ಉಪವಾಸ ಆರಂಭಗೊಳ್ಳುವ ಸಾಧ್ಯತೆ ಇದೆ. ಆದರೆ ಅಂತಿಮ ನಿರ್ಧಾರವನ್ನು ಚಂದ್ರದರ್ಶನ ಸಮಿತಿ ಘೋಷಿಸಲಿದೆ.

ಫೆಡರಲ್ ಘಟಕಗಳಿಗೆ ಕೆಲಸದ ಸಮಯವು ಸೋಮವಾರದಿಂದ ಗುರುವಾರದವರೆಗೆ ಬೆಳಿಗ್ಗೆ 9ರಿಂದ ಮಧ್ಯಾಹ್ನ 2:30ರವರೆಗೆ ನಿಗದಿಪಡಿಸಲಾಗಿದೆ. ಶುಕ್ರವಾರ ಬೆಳಿಗ್ಗೆ 9ರಿಂದ ಮಧ್ಯಾಹ್ನ 12 ರವರೆಗೆ ನಿಗದಿಪಡಿಸಲಾಗಿದೆ.

- Advertisement -

ಈ ಹೊಸ ಸಮಯವು, ಸರ್ಕಾರಿ ಸಂಸ್ಥೆಗಳಲ್ಲಿನ ಸಿಬ್ಬಂದಿಗೆ  ಶುಕ್ರವಾರ ಸಮಯವನ್ನು ಬದಲಾಯಿಸಲು ಅವಕಾಶ ಕಲ್ಪಿಸಲಾಗಿದೆ.

Join Whatsapp