ನವದೆಹಲಿ : ಮಾಜಿ ಡಬ್ಲ್ಯೂಡಬ್ಲ್ಯೂಇ ಚಾಂಪಿಯನ್ ‘ದ ಗ್ರೇಟ್ ಖಲಿ’ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸರಕಾರದ ವಿರುದ್ಧ ನಡೆಯುತ್ತಿರುವ ರೈತರ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ತಿಕ್ರಿ ಗಡಿಯಲ್ಲಿ ಪ್ರತಿಭಟನೆ ನಿರತರಾದ ರೈತರೊಂದಿಗೆ ಅವರು ಸೇರಿಕೊಂಡಿದ್ದಾರೆ.
ರೈತರ ಬೆಂಬಲಕ್ಕೆ ಭಾರತೀಯರು ಮುಂದೆ ಬರಬೇಕು ಎಂದು ಖಲಿ ಮನವಿ ಮಾಡಿದ್ದಾರೆ. ಪ್ರತಿಭಟನೆಯಲ್ಲಿ ತಾನು ಭಾಗಿಯಾದ ಎರಡು ವೀಡಿಯೊಗಳನ್ನು ಖಲಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಮೂಲತಃ ಪಂಜಾಬ್ ನವರಾದ ಖಲಿ, ಸರಕಾರ ತರಲು ಉದ್ದೇಶಿಸಿರುವ ಕಾನೂನು ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ. ರೈತರ ಸಂಕಷ್ಟಗಳು ಮತ್ತು ಕೃಷಿ ಕಾನೂನಿನಿಂದ ಜನ ಸಾಮಾನ್ಯರು ಎದುರಿಸಬಹುದಾದ ಸಮಸ್ಯೆಗಳ ಬಗ್ಗೆ ಅವರು ಮಾತನಾಡಿದ್ದಾರೆ.
ರೈತರು ಆರು ತಿಂಗಳ ಊಟಕ್ಕೆ ಬೇಕಾಗುವಷ್ಟು ರೇಶನ್ ತೆಗೆದುಕೊಂಡು ಬಂದಿರುವುದರಿಂದ, ಸರಕಾರ ತನ್ನ ನಿರ್ಧಾರ ಹಿಂಪಡೆಯದೆ ಅವರು ಹಿಂದಿರುಗುವುದಿಲ್ಲ ಎಂದು ಖಲಿ ಹೇಳಿದ್ದಾರೆ.