ಮತಾಂತರ ತಡೆ ಕಾಯ್ದೆಯಡಿ ಉತ್ತರ ಪ್ರದೇಶದಲ್ಲಿ ಮೊದಲ ಬಂಧನ

Prasthutha|

ಬರೇಲಿ : ಹೊಸದಾಗಿ ಜಾರಿಯಾದ ಮತಾಂತರ ವಿರೋಧಿ ಕಾನೂನಿನಡಿ ಪ್ರಕರಣ ದಾಖಲಾದ ಮೂರು ದಿನಗಳ ಬಳಿಕ, ಮೊದಲ ಆರೋಪಿಯನ್ನು ಬಂಧಿಸಲಾಗಿದೆ.

ಆರೋಪಿಯನ್ನು ಉವೈಷ್ ಅಹಮದ್ (22) ಎಂದು ಗುರುತಿಸಲಾಗಿದೆ. ಆತನ ವಿರುದ್ಧ ಭಾನುವಾರ ಪ್ರಕರಣ ದಾಖಲಾಗಿತ್ತು.

- Advertisement -

ಉತ್ತರ ಪ್ರದೇಶ ಕಾನೂನು ಬಾಹಿರ ಧಾರ್ಮಿಕ ಮತಾಂತರ ಸುಗ್ರೀವಾಜ್ಞೆಯಡಿ ಅಹಮದ್ ವಿರುದ್ಧ ದೂರು ದಾಖಲಾಗಿದೆ. ಬರೇಲಿಯ ದೇವೊರಾನಿಯದ 20ರ ಹರೆಯದ ಯುವತಿಯನ್ನು ಅಪಹರಿಸಿ, ಮತಾಂತರ ಮಾಡುವುದಾಗಿ ಬೆದರಿಕೆಯೊಡ್ಡಿದ ಆರೋಪ ಅಹಮದ್ ವಿರುದ್ದ ದಾಖಲಿಸಲಾಗಿದೆ.  

- Advertisement -