ಅಮರೀಂದರ್ ಸಿಂಗ್ – ಅಮಿತ್ ಶಾ ಭೇಟಿ | ವಿವಾದ ಬೇಗ ಇತ್ಯರ್ಥಗೊಳಿಸುವಂತೆ ರೈತರು, ಗೃಹ ಸಚಿವಗೆ ಪಂಜಾಬ್ ಸಿಎಂ ಮನವಿ

Prasthutha|

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಸರಕಾರದ ನೂತನ ಕೃಷಿ ನೀತಿ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಸಂಬಂಧಿಸಿ, ವಿವಾದವನ್ನು ಇತ್ಯರ್ಥಗೊಳಿಸುವಂತೆ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ರೈತರು ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ಕೋರಿದ್ದಾರೆ.

ಅಮಿತ್ ಶಾ ಅವರನ್ನು ನಿವಾಸದಲ್ಲಿ ಭೇಟಿಯಾದ ಬಳಿಕ ಅಮರೀಂದರ್ ಸಿಂಗ್ ಮಾತನಾಡುತ್ತಾ, ಶೀಘ್ರದಲ್ಲೇ ಸಾಮಾನ್ಯ ನೆಲೆಯನ್ನು ಕಂಡುಕೊಳ್ಳಬೇಕು, ಎರಡೂ ಕಡೆಯವರೂ ಕಠಿಣ ನಿಲುವು ತೆಗೆದುಕೊಳ್ಳಬಾರದು ಎಂದಿದ್ದಾರೆ.

- Advertisement -

ಪ್ರತಿಭಟನೆಯಿಂದಾಗಿ ಪಂಜಾಬ್ ನ ಆರ್ಥಿಕತೆಗೆ ನಷ್ಟವಾಗುತ್ತಿದೆ ಎಂದು ಅಭಿಪ್ರಾಯ ಪಟ್ಟಿರುವ ಅವರು, ವಿವಾದ ಬೇಗ ಇತ್ಯರ್ಥ ಪಡಿಸುವಂತೆ ಅಮಿತ್ ಶಾಗೆ ತಾವು ಮನವಿ ಮಾಡಿರುವುದಾಗಿ ತಿಳಿಸಿದ್ದಾರೆ.  

- Advertisement -