ನಕ್ಷತ್ರಕ್ಕೆ ಹತ್ತಿರವಿರುವ ಹೊಸದೊಂದು ಗ್ರಹ ಪತ್ತೆ: ಇಸ್ರೋ ಮಹತ್ವದ ಸಾಧನೆ ಇದು ; ಸೂರ್ಯನಿಗಿಂತ ಬಲು ದೊಡ್ಡದು!

Prasthutha|

ಅಹ್ಮದಾಬಾದ್: ಸೌರಮಂಡಲ¬ದಿಂದ ಹೊರಗೆ ಗ್ರಹವೊಂದು ನಕ್ಷತ್ರವನ್ನು ಸುತ್ತುತ್ತಿರುವುದನ್ನು ಪತ್ತೆ ಹಚ್ಚಲಾಗಿದ್ದು, ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ –ಇಸ್ರೋ ಮಹತ್ವದ ಸಾಧನೆ ಮಾಡಿದೆ. ಇಸ್ರೋದ ಅಹ್ಮದಾಬಾದ್‌ನ ಪ್ರೊ. ಅಭಿಜಿತ್‌ ಚಕ್ರವರ್ತಿ ನೇತೃತ್ವದ ತಂಡವು ಈ ಗ್ರಹಮಂಡಲವನ್ನು ಪತ್ತೆ ಹಚ್ಚಿದ್ದು, ಇದಕ್ಕೆ ಯೂರೋಪ್‌ ಹಾಗೂ ಅಮೆರಿಕದ ಬಾಹ್ಯಾಕಾಶ ವಿಜ್ಞಾನಿಗಳೂ ಸಾಥ್‌ ನೀಡಿದ್ದಾರೆ.

- Advertisement -

ಇದನ್ನು ಪತ್ತೆ ಹತ್ತಚು ವಿಜ್ಞಾನಿಗಳ ತಂಡ “2020ರ ಡಿಸೆಂಬರ್‌ನಿಂದ 2021ರ ಮಾರ್ಚ್‌ವರೆಗೆ ಸಂಶೋಧನೆ ಮಾಡಿದೆ. ಹೊಸದಾಗಿ ಪತ್ತೆ ಹಚ್ಚಲಾದ ಗ್ರಹವು ನಕ್ಷತ್ರಕ್ಕೆ ಅತೀ ಸಮೀಪದಲ್ಲಿದ್ದು, ಸೂರ್ಯನಿಂದ ಬುಧನಿಗಿರುವ ಅಂತರದ 10ನೇ ಒಂದು ಭಾಗದಷ್ಟು ದೂರದಲ್ಲಿ ಇದೆ. ಅದೇ ಕಾರಣಕ್ಕೆ ಗ್ರಹವು ಕೇವಲ 3.2 ದಿನಗಳಲ್ಲಿ ನಕ್ಷತ್ರವನ್ನು ಸುತ್ತಿ ಬರುತ್ತಿದೆ.

ಈ ಗ್ರಹ ಗುರು ಗ್ರಹದ ಶೇ. 70ರಷ್ಟು ತೂಕ ಹೊಂದಿದ್ದು, ಹ ಇದರ ತ್ರಿಜ್ಯವು ಗುರು ಗ್ರಹಕ್ಕಿಂತ 1.4 ಪಟ್ಟು ಹೆಚ್ಚಿದೆ. ಇದು ಭೂಮಿಯಿಂದ 725 ಜ್ಯೋರ್ತಿ¬ವರ್ಷ ದೂರವಿದೆ. ನಮ್ಮ ಸೂರ್ಯ ನಿಗಿಂತ 1.5 ಪಟ್ಟು ಹೆಚ್ಚು ದೊಡ್ಡದಾಗಿದೆ ’ ಎಂದು ವಿಜ್ಞಾನಿಗಳು ತಿಳಿಸಿ ದ್ದಾರೆ.

- Advertisement -

ಈ ರೀತಿಯಲ್ಲಿ ನಕ್ಷತ್ರಕ್ಕೆ ತೀರಾ ಹತ್ತಿರವಾಗಿ ಸುತ್ತುವ ಸುಮಾರು 10 ಗ್ರಹಗಳು ಈಗಾಗಲೇ ಪತ್ತೆಯಾ¬ಗಿವೆ. ನಕ್ಷತ್ರಕ್ಕೆ ಸಹತ್ತಿರದಲ್ಲಿರುವುಇದರಿಂದ ಈ ಗ್ರಹದಲ್ಲಿ 2000ಕೆ ಉಷ್ಣಾಂಶ ಇರಲಿದೆಯೆಂದು ಅಂದಾಜಿಸ¬ಲಾಗಿದೆ. ಈ ರೀತಿ ನಕ್ಷತ್ರಕ್ಕೆ ತುಂಬಾ ಹತ್ತಿರವಾಗಿ ಸುತ್ತುವ ಗ್ರಹಗಳಿಗೆ “ಹಾಟ್‌ ಜುಪಿಟರ್‌’ ಎಂದು ಕರೆಯಲಾಗುವುದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

Join Whatsapp