ಪಾಸಿಟಿವ್ ಕೇಸ್ ಹೆಚ್ಚಳ | ರೂಲ್ಸ್ ಮತ್ತಷ್ಟು ಬಿಗಿ : ದ.ಕ ಜಿಲ್ಲಾಧಿಕಾರಿ

Prasthutha|

ಮಂಗಳೂರು : ಜಿಲ್ಲೆಯಲ್ಲಿ ನಿತ್ಯ ಹೆಚ್ಚು ಪಾಸಿಟಿವ್ ಕೇಸ್ ವರದಿಯಾಗುತ್ತಿದ್ದು, ಸೋಂಕು ನಿಯಂತ್ರಣ ಹಿನ್ನೆಲೆಯಲ್ಲಿ ಕೋವಿಡ್ ಲಾಕ್ ಡೌನ್ ರೂಲ್ಸ್ ಮತ್ತಷ್ಟು ಬಿಗಿಗೊಳಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರಾಜೇಂದ್ರ ಕೆವಿ ಹೇಳಿದ್ದಾರೆ.

- Advertisement -

ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಲಾಕ್ ಡೌನ್ ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ನಿರ್ಣಯ ಕೈಗೊಳ್ಳಲಾಗಿದ್ದು, ಮನಪಾ ವ್ಯಾಪ್ತಿಯಲ್ಲಿ ಹತ್ತು ಪ್ಲೈಂಗ್ ಸ್ಕಾಡ್ ರಚನೆ ಮಾಡಲಾಗಿದೆ. ಗ್ರಾಮೀಣ ಪ್ರದೇಶದಲ್ಲೂ ಹೆಚ್ಚಿನ ಕ್ರಮ ಕೈಗೊಂಡು ಮುಂಜಾನೆ ಅಗತ್ಯ ಸೇವೆ ಸಂದರ್ಭದಲ್ಲೂ ಕೊವಿಡ್ ರೂಲ್ಸ್ ಪಾಲನೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ಕೋವಿಡ್ ಲಾಕ್ ಡೌನ್ ವೇಳೆ ಜಿಲ್ಲೆಯ ಜನರು ಮನೆಯಲ್ಲೇ ಇರಬೇಕು. ಮುಂಜಾನೆ 6 ರಿಂದ 10 ಗಂಟೆಯವರೆಗೆ ಅಗತ್ಯ ಸೇವೆಗೆ ಅವಕಾಶವಿದ್ದು, ಈ ವೇಳೆ ನಾಗರಿಕರು ಅನಗತ್ಯ ಸಂಚಾರ ಮಾಡುತ್ತಿದ್ದಾರೆ. ಈ ಬಗ್ಗೆ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಂಡು ಜಿಲ್ಲೆಯ ಪೊಲೀಸ್ ಚೆಕ್ ಪೊಸ್ಟ್ ಗಳಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಜನರು ಈ ಲಾಕ್ ಡೌನ್ ಗೆ ಸಹಕಾರ ಹೆಚ್ಚಾಗಿ ನೀಡಬೇಕಿದೆ. ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಣ ಆಗದಿದ್ದಲ್ಲಿ ರಾಜ್ಯದ ಗೈಡ್ ಪಾಲನೆಯೊಂದಿಗೆ ಹೆಚ್ಚಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

Join Whatsapp