ಉಯಿಘರ್ ಮುಸ್ಲಿಮರ ಜನಸಂಖ್ಯಾ ನಿಯಂತ್ರಣಕ್ಕೆ ಚೀನಾದಿಂದ ಕಟ್ಟುನಿಟ್ಟಿನ ಕ್ರಮ : ರಾಯಿಟರ್ಸ್ ವರದಿ

Prasthutha|

ಬೀಜಿಂಗ್: ಉಯಿಘರ್ ಮುಸ್ಲಿಮರು ಮತ್ತು ಇತರ ಅಲ್ಪಸಂಖ್ಯಾತರಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯನ್ನು ನಿಗ್ರಹಿಸಲು ಚೀನಾ ಕಟ್ಟುನಿಟ್ಟಾದ ನೀತಿಗಳನ್ನು ಜಾರಿಗೆ ತರುತ್ತಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಚೀನಾ ಜಾರಿಗೆ ತಂದಿರುವ ಜನನ ನಿಯಂತ್ರಣ ನೀತಿಗಳಿಂದಾಗಿ 20 ವರ್ಷಗಳಲ್ಲಿ ಉಯಿಘರ್ ಮತ್ತು ಇತರ ಜನಾಂಗೀಯ ಅಲ್ಪಸಂಖ್ಯಾತರ ಜನನ ಪ್ರಮಾಣ ಗಮನಾರ್ಹವಾಗಿ ಕಡಿಮೆಯಾಗಲಿವೆ ಎಂದು ವರದಿಯಾಗಿದೆ.

- Advertisement -

ಅಲ್ಪಸಂಖ್ಯಾತ ಸಮುದಾಯದ ಜನಸಂಖ್ಯೆಯನ್ನು ಮೂರನೇ ಒಂದು ಭಾಗದಷ್ಟು ಕಡಿಮೆ ಮಾಡುವ ಗುರಿಯನ್ನು ಚೀನಾ ಹೊಂದಿದೆ ಎಂದು ಜರ್ಮನ್ ಸಂಶೋಧಕರು ತಿಳಿಸಿದ್ದಾರೆ. ಜನನ ನಿಯಂತ್ರಣ ನೀತಿಗಳ ಹಿಂದಿನ ಚೀನಾದ ಉದ್ದೇಶದ ಬಗ್ಗೆ ಚೀನಾದ ಶಿಕ್ಷಣ ತಜ್ಞರು ಮತ್ತು ಅಧಿಕಾರಿಗಳು ಸಿದ್ಧಪಡಿಸಿದ ಸಂಶೋಧನಾ ಸಂಗ್ರಹ ಪ್ರಕಟಣೆಗೆ ಮೊದಲೇ ರಾಯಿಟರ್ಸ್ ಬಿಡುಗಡೆ ಮಾಡಿದೆ. ಅದರಂತೆ, ಅಲ್ಪಸಂಖ್ಯಾತರ ಜನನ ಪ್ರಮಾಣ ಈಗಾಗಲೇ ಕುಸಿದಿದೆ. ಮುಸ್ಲಿಮರ ನಡುವೆ ಕುಟುಂಬ ಯೋಜನೆ ಸೇರಿದಂತೆ ಕಟ್ಟುನಿಟ್ಟಾದ ಜನನ ನಿಯಂತ್ರಣ ಕಾರ್ಯಕ್ರಮಗಳನ್ನು ಚೀನಾ ಸರ್ಕಾರ ಜಾರಿಗೆ ತರುತ್ತಿದೆ.

Join Whatsapp