ನಾಯಿ ಸತ್ತರೂ ಸಂತಾಪ ಸೂಚಿಸುತ್ತಿದ್ದ ಕೇಂದ್ರ ಸರಕಾರ ರೈತರ ಸಾವಿಗೆ ದುಃಖಿಸಲಿಲ್ಲ : ಮೆಘಾಲಯ ರಾಜ್ಯಪಾಲ

Prasthutha|

ಜೈಪುರ : ಕೇಂದ್ರ ಸರಕಾರ ಜಾರಿಗೆ ತಂದ ಮೂರು ರೈತ ವಿರೋಧಿ ಕೃಷಿ ಕಾಯ್ದೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ರೈತರ ಸಮಸ್ಯೆ ಹಾಗೂ ಸೆಂಟ್ರಲ್ ವಿಸ್ಟಾ ಯೋಜನೆಗೆ ಸಂಬಂಧಿಸಿದಂತೆ ಮೇಘಾಲಯ ರಾಜ್ಯಪಾಲ ಸತ್ಯಪಾಲ್ ಮಲಿಕ್ ರವಿವಾರ ಕೇಂದ್ರ ಹಾಗೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

- Advertisement -

ಜೈಪುರದಲ್ಲಿ ಸರಣಿ ಟೀಕೆಗಳನ್ನು ಮಾಡಿರುವ ಮಲಿಕ್, ದಿಲ್ಲಿ ಯ ನಾಯಕರು ನಾಯಿ ಸತ್ತಾಗಲೂ ಸಂತಾಪ ಸೂಚಿಸುತ್ತಾರೆ ಆದರೆ ಕೇಂದ್ರದ ಮೂರು ಕೃಷಿ-ಮಾರುಕಟ್ಟೆ ಕಾನೂನುಗಳ ವಿರುದ್ಧದ ಆಂದೋಲನದ ಸಂದರ್ಭದಲ್ಲಿ “600” ರೈತರ ಸಾವಿನ ಬಗ್ಗೆ ಅವರಲ್ಲಿ ಯಾರೂ ದುಃಖ ವ್ಯಕ್ತಪಡಿಸಲಿಲ್ಲ ಎಂದರು.

ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆಯನ್ನು ಉಲ್ಲೇಖಿಸಿದ ಅವರು, ಸಿಖ್ ಸಮುದಾಯವನ್ನು ದ್ವೇಷಿಸಬೇಡಿ ಎಂದು ಸರಕಾರವನ್ನು ಕೇಳಿದರು. ಸರಕಾರದಲ್ಲಿ ರೈತರ ಪರ ಇರುವವರಿದ್ದಾರೆ. ಆದರೆ ಒಂದೆರಡು ವ್ಯಕ್ತಿಗಳು ದುರಹಂಕಾರಿಗಳಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.



Join Whatsapp