ಇಂದು ಭಾರತದಲ್ಲಿರುವುದು ತುರ್ತು ಪರಿಸ್ಥಿತಿಗಿಂತ ಕೆಟ್ಟದಾದ ವಾತಾವರಣ: ಪ್ರಶಾಂತ್ ಭೂಷಣ್

Prasthutha|

ಹೊಸದಿಲ್ಲಿ: ಇಂದು ದೇಶದಲ್ಲಿ 1975ರ ತುರ್ತು ಪರಿಸ್ಥಿತಿಗಿಂತ ಕೆಟ್ಟ ವಾತಾವರಣವಿದೆ ಎಂದು ವಕೀಲ ಪ್ರಶಾಂತ್ ಭೂಷಣ್ ಹೇಳಿದ್ದಾರೆ.

- Advertisement -

ಕೇರಳದ ಪಿಜಿ ಸಾಂಸ್ಕೃತಿಕ ಕೇಂದ್ರದ ಪಿ. ಗೋವಿಂದ ಪಿಳ್ಳೈ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.

” ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಜನರ ಸ್ವಾತಂತ್ರ್ಯ ಮತ್ತು ಪತ್ರಿಕಾ ಸ್ವಾತಂತ್ರ್ಯಕ್ಕೆ ಸವಾಲು ಹಾಕಲಾಗಿತ್ತು. ಆಗ ಯಾವುದೇ ಗುಂಪು ಹತ್ಯೆಯಾಗಲೀ, ದ್ವೇಷ ಪ್ರಚೋದನೆಯಾಗಲೀ, ಶೋಷಣೆಯಾಗಲೀ ಇರಲಿಲ್ಲ. ಇಂದು ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿ ಮಾಧ್ಯಮಗಳ ಸ್ವಾತಂತ್ರವನ್ನು ಕಸಿದುಕೊಂಡು ಅವರ ಬಾಯಿ ಮುಚ್ಚಿಸಲು ಕಸರತ್ತು ನಡೆಸಲಾಗುತ್ತಿದೆ. ದೇಶದ ನ್ಯಾಯಾಂಗವು ಮಧ್ಯಪ್ರವೇಶಿಸಬೇಕಾದ ಅನಿವಾರ್ಯತೆ ಇದೆ” ಎಂದು ಪ್ರಶಾಂತ್ ಭೂಷಣ್ ಹೇಳಿದರು.

- Advertisement -

ಕೇಂದ್ರ ಸರ್ಕಾರವನ್ನು ಟೀಕಿಸುವವರ ವಿರುದ್ಧ UAPA ಕಾನೂನನ್ನು ಹೇರುವ ಮೂಲಕ ವ್ಯಾಪಕವಾಗಿ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. UAPA ಕಾನೂನಿನ ಹಲವು ನಿಬಂಧನೆಗಳು ಸಾಂವಿಧಾನ ಖಾತರಿಪಡಿಸುವ ಬದುಕುವ ಹಕ್ಕಿಗೆ ವಿರುದ್ಧವಾಗಿವೆ ಎಂದು ಅವರು ಹೇಳಿದ್ದಾರೆ.

Join Whatsapp