ತಂದೆಯ ವ್ಯಾಪಾರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಬಾಲಕ; ಗ್ರಾಹಕರಿಂದ ಸಕಾರಾತ್ಮಕ ಪ್ರತಿಕ್ರಿಯೆ

Prasthutha|

ಹೈದರಾಬಾದ್: ಸಣ್ಣ ಬಾಲಕನೊಬ್ಬ ತನ್ನ ತಂದೆಯ ರಸ್ತೆ ಬದಿ ವ್ಯಾಪಾರಕ್ಕೆ ಬೆಂಬಲಿಸುವಂತೆ ವಿಡಿಯೋ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಇದು  ಆತನ ತಂದೆಯ ವ್ಯಾಪಾರಕ್ಕೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

- Advertisement -

ಹೈದರಾಬಾದಿನ ಮೋತಿ ನಗರದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಸ್ವಾದಿಷ್ಟ ಹಲೀಮ್  ವ್ಯಾಪಾರ ನಡೆಸುತ್ತಿರುವ ವ್ಯಕ್ತಿಯೊಬ್ಬರ ಪುತ್ರ, ತನ್ನ ತಂದೆಯ ವ್ಯಾಪಾರವನ್ನು ವಿವರಿಸಿ, ಬೆಂಬಲಿಸುವಂತೆ ಜಾಹೀರಾತು ರೂಪದಲ್ಲಿ ವಿಡಿಯೋ ಮಾಡಿದ್ದಾನೆ. ಬಾಲಕನ ಈ ವಿಡಿಯೋ ಹೈದರಾಬಾದ್ ನಿವಾಸಿಗಳ ನಡುವೆ ವೈರಲ್ ಆಗಿದ್ದು, ಸ್ಥಳೀಯರು ಮತ್ತು ಇನ್ನಿತರರು ಬಾಲಕನ ತಂದೆಯ ಹಲೀಮ್ ಸ್ಟಾಲ್ ಗೆ ಭಾರೀ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಮುಹಮ್ಮದ್ ಅದ್ನಾನ್ ಎಂಬ ಬಾಲಕ ತನ್ನ ತಂದೆಯನ್ನೂ, ಹಲೀಮ್ ಸ್ಟಾಲನ್ನೂ ಪರಿಚಯಿಸಿ , ಸ್ಟಾಲಿನಲ್ಲಿ ಲಭ್ಯವಿರುವ ವಿವಿಧ ಭಕ್ಷ್ಯಗಳನ್ನು ಪರಿಚಯಿಸುವುದು ವಿಡಿಯೋದಲ್ಲಿದೆ. 

- Advertisement -

ಬಾಲಕ ತನ್ನ ತಂದೆಯ ಸ್ಟಾಲ್ ಅನ್ನು ವಿವರಿಸುವ ಶೈಲಿಗೆ ಮಾರು ಹೋಗಿರುವ ಜನರು, ಸ್ಟಾಲ್ ನ ಗ್ರಾಹಕರಾಗುತ್ತಿದ್ದಾರೆ. ಇದರ ಬೆನ್ನಲ್ಲೇ, ಹಲವು ಯೂಟ್ಯೂಬ್ ಫುಡ್ ಬ್ಲಾಗರ್ ಗಳು, ಅದ್ನಾನ್ ತಂದೆಯ ಸ್ಟಾಲ್ ಗೆ ಭೇಟಿ ನೀಡಿ ಪ್ರೋತ್ಸಾಹ ನೀಡಿದ್ದಾರೆ, ಇದೀಗ ಆತನ ತಂದೆಯ “ಅಲ್ ಹಂದುಲಿಲ್ಲಾ ಚಿಕನ್ ಹಲೀಮ್ʼ ಸ್ಟಾಲ್ ಸ್ಥಳೀಯರ ಮೆಚ್ಚುಗೆ ಪಡೆದಿದೆ, ವ್ಯಾಪಾರವನ್ನೂ ಹಿಗ್ಗಿಸಿಕೊಂಡಿದೆ ಎಂದು ತಿಳಿದು ಬಂದಿದೆ.



Join Whatsapp