1 ಬಿಲಿಯನ್ ಕೋವಿಡ್ ಲಸಿಕೆಯಲ್ಲಿ ಭಾರತವೇ ಮೊದಲು; ಬಿಜೆಪಿ ನಾಯಕರಿಂದ ಸುಳ್ಳು ಪ್ರಚಾರ

Prasthutha|

ಹೊಸದಿಲ್ಲಿ:ಭಾರತವು 1 ಬಿಲಿಯನ್ ಕೋವಿಡ್ ಲಸಿಕೆ ಡೋಸ್‌ಗಳನ್ನು ಪೂರೈಸಿದ ಮೊದಲ ದೇಶ ಎಂದು ಹಲವಾರು ಬಿಜೆಪಿ ನಾಯಕರು ಮತ್ತು ವಕ್ತಾರರು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ.

- Advertisement -

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಬಿಜೆಪಿ ನಾಯಕರಾದ ಸಿಟಿ ರವಿ, ಬಿಜೆಪಿ ಹರಿಯಾಣದ ರಾಜ್ಯಾಧ್ಯಕ್ಷ ಓಂ ಪ್ರಕಾಶ್ ಧನಕರ್ ಮತ್ತು ಬಿಜೆಪಿ ಉತ್ತರ ಪ್ರದೇಶದ ಅಧಿಕೃತ ವಕ್ತಾರ ಅಲೋಕ್ ಅವಸ್ಥಿ ಮುಂತಾದವರು ಕೋವಿಡ್ ಲಸಿಕೆ ಪೂರೈಕೆಯಲ್ಲಿ ಭಾರತವೇ ಮೊದಲು ಎಂದು ಹಂಚಿಕೊಳ್ಳುತ್ತಿದ್ದಾರೆ. ಧನಕರ್ ಅವರು ತಮ್ಮ ಅಧಿಕೃತ ಫೇಸ್‌ಬುಕ್ ಪೇಜ್‌ನಲ್ಲಿಯೂ ಇದೇ ಹೇಳಿಕೆ ನೀಡಿದ್ದಾರೆ.

ಆದರೆ 1 ಬಿಲಿಯನ್ ಕೋವಿಡ್ ಲಸಿಕೆ ಡೋಸ್‌ಗಳನ್ನು ನೀಡಿದ ಮೊದಲ ದೇಶ ಭಾರತವಲ್ಲ. 1 ಶತಕೋಟಿ ಕೋವಿಡ್ ಲಸಿಕೆಯನ್ನು ತಲುಪಿದ ಮೊದಲ ದೇಶ ಚೀನಾ,ಇದು ಜೂನ್ 19, 2021 ರಂದೇ ಈ ಮೈಲಿಗಲ್ಲನ್ನು ಸಾಧಿಸಿದೆ ಎಂದು ಅಧಿಕೃತ ಮೂಲಗಳು ವರದಿ ಮಾಡಿವೆ. ಇನ್ನೊಂದು ವರದಿಯು ಸೆಪ್ಟೆಂಬರ್ 16  ರ ವೇಳೆಗೆ ಚೀನಾ ತನ್ನ ಜನಸಂಖ್ಯೆಯ 1 ಬಿಲಿಯನ್ ಅನ್ನು ಸಂಪೂರ್ಣವಾಗಿ ಚುಚ್ಚುಮದ್ದು ಮಾಡಿದೆ ಎಂದು ಉಲ್ಲೇಖಿಸುತ್ತದೆ.

- Advertisement -

1 ಬಿಲಿಯನ್ ಡೋಸ್ ಕೋವಿಡ್ -19 ಲಸಿಕೆಯನ್ನು ನೀಡಿದ ಮೊದಲ ದೇಶ ಭಾರತ ಎಂಬ ಬಿಜೆಪಿ ನಾಯಕರ ಹೇಳಿಕೆಗಳು ಸುಳ್ಳು ಎಂದು ಫ್ಯಾಕ್ಟ್ ಚೆಕ್ ಕಂಡುಹಿಡಿದಿದೆ

Join Whatsapp