ಎರಡು ತಲೆಯ ಮಗು ಜನನ; ಹೆತ್ತವರು ಆಸ್ಪತ್ರೆಯಲ್ಲೇ ಬಿಟ್ಟು ಪರಾರಿ

Prasthutha: November 27, 2021

ರಾಂಚಿ: ತಾವೇ ಹೆತ್ತ ಮಕ್ಕಳನ್ನು ತ್ಯಜಿಸಲು ಬಯಸುವವರ ಇದ್ದಾರೆ ಎಂಬ ವಾಸ್ತವವನ್ನು ಜೀರ್ಣಿಸಲು ಕೆಲವರಿಗೆ ಕಷ್ಟವಾಗ ಬಹುದು. ಆದರೆ ಅಂತಹ ಘಟನೆ ನಡೆಯುತ್ತಾನೇ ಇದೆ. ಕಸದ ಬುಟ್ಟಿಗೆ ಹಾಕಲ್ಪಟ್ಟು ಮಗು ನಾಯಿಮರಿಗಳಿಗೆ ಆಹಾರವಾದ ಘಟನೆಗಳೂ ಇವೆ. ಅವಿವಾಹಿತರಾಗಿ ಮಗುವಿಗೆ ಜನ್ಮ ನೀಡಿ, ಸಮಾಜದ ಭಯಕ್ಕೆ ಅದನ್ನು ಬಿಟ್ಟು ಬಿಡುವ ತಾಯಂದಿರು ಇದ್ದರೆ, ಹೆಣ್ಣು ಮಗು ಅಥವಾ ಅಂಗವೈಕಲ್ಯದ ಮಗು ಎಂದು ಅದನ್ನು ತ್ಯಜಿಸುವ ಹೆತ್ತವರೂ ಇದ್ದಾರೆ. ಆದರೆ ಮನುಷ್ಯತ್ವ ಉಳ್ಳವರು ಹೀಗೆ ಮಾಡಲಾರರು.

ಇದೀಗ ಜಾರ್ಖಂಡ್ನ್ ರಾಜಧಾನಿ ರಾಂಚಿಯಲ್ಲಿ ರಾಜೇಂದ್ರ ಇನ್ಸ್ಟಿ ಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆಸ್ಪತ್ರೆಯಲ್ಲಿ ಎರಡು ತಲೆಯೊಂದಿಗೆ ಶಿಸುವೊಂದು ಜನಿಸಿದೆ. ಆ ನವಜಾತ ಶಿಶುವೊಂದನ್ನು ಅದರ ಹೆತ್ತವರು ಬಿಟ್ಟು, ಪರಾರಿಯಾಗಿದ್ದಾರೆ. ತಮ್ಮ ಆ ಶಿಶು ಎರಡು ತಲೆಗಳೊಂದಿಗೆ ಜನ್ಮ ತಾಳಿರುವುದರಿಂದ ಅವರು ಅದನ್ನು ಬಿಟ್ಟು ಓಡಿ ಹೋಗಿದ್ದಾರೆ ಎಂದು ಅಂದಾಜಿಸಲಾಗಿದೆ.

ಆ ಶಿಶು ಓಸಿಪಿಟಲ್ ಮೆನಿಂಜೋ ಇನ್ಸೆ ಫಲೋಸಿಲ್ ಕಾಯಿಲೆಯೊಂದಿಗೆ ಜನ್ಮ ತಾಳಿದೆ. ಆದರೆ ಅದು ಎರಡು ತಲೆಯದ್ದಲ್ಲ. ಆ ಮಗುವಿನ ತಲೆಯ ಹಿಂಭಾಗ ಚೀಲದಂತೆ ಮತ್ತು ಎರಡು ತಲೆ ಇರುವಂತೆ ಕಾಣುತ್ತದೆ. ಈ ಎರಡು ತಲೆಯ ಮಗುವಿನ ಜನನದ ಬಳಿಕ, ಅದರ ಕ್ರೂರ ಮನಸ್ಸಿನ ಹೆತ್ತವರು ಅದನ್ನು ಆಸ್ಪತ್ರೆಯಲ್ಲೇ ಬಿಟ್ಟು ಓಡಿಹೋಗಿದ್ದಾರೆ. ಪರಾರಿಯಾದ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ, ಅವರು ಆಸ್ಪತ್ರೆಗೆ ನೀಡಿರುವ ವಿಳಾಸ ಕೂಡ ನಕಲಿ ಎಂಬುವುದು ತಿಳಿದು ಬಂದಿದೆ.

ಬಹುಶಃ, ತಮ್ಮ ಮಗು ಈ ರೀತಿ ಹುಟ್ಟುತ್ತದೆ ಎಂಬುವುದು ಅವರಿಗೆ ಮೊದಲೇ ತಿಳಿದಿತ್ತು ಎಂದು ಅಂದಾಜಿಸಲಾಗಿದೆ. ಮಗು ಜನಿಸಿದ ಕೂಡಲೇ, ಅದನ್ನು ಐಸಿಯುಗೆ ಸೇರಿಸಲಾಯಿತು ಮತ್ತು ಅದೇ ಸಮಯದಲ್ಲಿ ಮಗುವಿನ ಕುಟುಂಬದವರು ಅಲ್ಲಿಂದ ಸದ್ದಿಲ್ಲದೆ ಪರಾರಿ ಆಗಿದ್ದಾರೆ. ಆದರೆ ಹೆತ್ತವರು ಕೈಬಿಟ್ಟರೂ ವೈದ್ಯರು ಮಗುವಿನ ಕೈ ಬಿಟ್ಟಿಲ್ಲ. ರಿಮ್ಸ್ನಿ ವೈದ್ಯರು ಇದೀಗ ಮಗುವನ್ನು ಉಳಿಸುವ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.

ರಿಮ್ಸ್ನ ಆಡಳಿತ ಮಂಡಳಿಯು ಈ ಬಗ್ಗೆ ಸಿಡಬ್ಲ್ಯೂಸಿ ಗೆ ವರದಿ ಮಾಡಿದೆ. ಸಿಡಬ್ಲ್ಯೂಸಿಯಿಂದ ಮಾಹಿತಿಯನ್ನು ಪಡೆದ ಬಳಿಕ ಕರುಣಾ ಸಂಸ್ಥೆ ಆ ಗಂಡು ಮಗುವಿಗೆ ಸಹಾಯ ಮಾಡಲು ಮುಂದೆ ಬಂದಿದೆ. ಮಗುವನ್ನು ಈಗ ಮಕ್ಕಳ ವಿಭಾಗದಿಂದ ನರಶಸ್ತ್ರಚಿಕಿತ್ಸಾ ವಿಭಾಗಕ್ಕೆ ಕಳುಹಿಸಿಕೊಡಲಾಗಿದೆ. ವೈದ್ಯರು ಆ ಮಗುವಿಗೆ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಮಗುವಿನ ಚಿಕಿತ್ಸೆ ಮುಗಿದ ಬಳಿಕ ಅದನ್ನು ಕರುಣಾ ಆಶ್ರಮಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ. ರಾಂಚಿಯ ಹಲವಾರು ವೈದ್ಯರು ನಡೆಸುವ ಸಂಸ್ಥೆಯಾಗಿದೆ ಕರುಣಾ ಆಶ್ರಮ.

ಮತ್ತೂ ಬೇಸರದ ವಿಷಯ ಏನೆಂದರೆ ಓಸಿಪಿಟಲ್ ಮೆನಿಂಜೊ ಇನ್ಸೆಾಫಲೋಸಿಲ್ ಕಾಯಿಲೆ ಒಂದು ಜನ್ಮದತ್ತ ಕಾಯಿಲೆಯಾಗಿದೆ. ಅದರಲ್ಲಿ ತಲೆ ಬುರುಡೆಯ ಮೂಳೆಗಳು ಹೊರಗೆ ಬಂದಿರುತ್ತವೆ ಮತ್ತು ತಲೆ ಹಿಂದೆ ಒಂದು ಚೀಲದ ರೂಪದಲ್ಲಿ ಸಂಗ್ರಹವಾಗಿರುತ್ತವೆ. ಮಗು ಜೀವನ ಪರ್ಯಂತ ಈ ಕಾಯಿಲೆಯಿಂದ ಬಳಬೇಕಾಗುತ್ತದೆ. ಇದರಿಂದ ಇನ್ನಿತರ ಕಾಯಿಲೆಗಳು ಬರುವ ಸಂಭವ ಕೂಡ ಇರುತ್ತವೆ ಎಂದು ತಜ್ಞ ವೈದ್ಯರು ಹೇಳಿದ್ದಾರೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!