ಮಂಗಳೂರು ವೈದ್ಯನ ಲೈಂಗಿಕ ಕಾಂಡದ ವರದಿ : ‘ದಿಗ್ವಿಜಯ’ ಟಿವಿ ಚಾನೆಲ್ ಆ್ಯಂಕರ್’ನಿಂದ ಯಕ್ಷಗಾನ ಕಲೆಗೆ ಅವಮಾನ !

Prasthutha|

►ಸುದ್ದಿ + ವೀಡಿಯೋ

- Advertisement -

ಮಂಗಳೂರು : ಇತ್ತೀಚೆಗೆ ಮಂಗಳೂರಿನ ವೈದ್ಯನೊಬ್ಬ ತನ್ನ ಕಚೇರಿಯ ಸಿಬ್ಬಂದಿಗಳೊಂದಿಗೆ ಸರಸವಾಡುತ್ತಿರುವ ವೀಡಿಯೋ ಮತ್ತು ಫೋಟೋಗಳು ವೈರಲ್ ಆಗಿದ್ದವು. ಈ ಘಟನೆಯ ವರದಿಯನ್ನು ತಮ್ಮ ಚಾನೆಲಿನಲ್ಲಿ ಬಿತ್ತರಿಸುವ ವೇಳೆ ಕನ್ನಡದ ‘ದಿಗ್ವಿಜಯ ನ್ಯೂಸ್’ ಚಾನೆಲಿನ ಆ್ಯಂಕರ್ ರಕ್ಷತ್ ಎನ್ನುವಾತ ಕರಾವಳಿಯ ಜನರು ಗೌರವಿಸುವ ಯಕ್ಷಗಾನ ಕಲೆಯನ್ನು ಅವಮಾನಿಸುವ ಘಟನೆ ನಡೆದಿದೆ. ಇದರ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆ್ಯಂಕರ್ ನ ವಿರುದ್ಧ ಯಕ್ಷಗಾನ ಕಲಾಭಿಮಾನಿಗಳು  ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಯುಷ್ ನೋಡಲ್ ಅಧಿಕಾರಿಯಾಗಿದ್ದ ರತ್ನಾಕರ್ ಎಂಬ ವೈದ್ಯ ತನ್ನ ಕಚೇರಿಯಲ್ಲಿನ ಮಹಿಳಾ ಸಿಬ್ಬಂದಿಗಳೊಂದಿಗೆ ಅನುಚಿತವಾಗಿ ವರ್ತಿಸುವ ವೀಡಿಯೋ, ಫೋಟೋಗಳು ವೈರಲ್ ಆಗಿ ಕೊನೆಗೆ ಆತನನ್ನು ಆರೋಗ್ಯ ಇಲಾಖೆ ಅಮಾನತು ಮಾಡಲಾಗಿತ್ತು. ಈ ಘಟನೆ ರಾಜ್ಯದಲ್ಲಿ ಸಾಕಷ್ಟು ಚರ್ಚೆಗೊಳಗಾಗಿತ್ತು. ಹಲವು ಮಾಧ್ಯಮಗಳು ಈ ಕುರಿತು ಸುದ್ದಿಗಳನ್ನು ಬಿತ್ತರಿಸಿದ್ದವು. ಆದರೆ ‘ದಿಗ್ವಿಜಯ ನ್ಯೂಸ್’ ಚಾನೆಲಿನ ಆ್ಯಂಕರ್ ರಕ್ಷತ್ ಶೆಟ್ಟಿ, ವೈದ್ಯ ರತ್ನಾಕರನ ಕರ್ಮಕಾಂಡದ ಕುರಿತು ವಿವರಿಸುವಾಗ, “ಈ ವೈದ್ಯ  ಹೋಟೆಲಿನಲ್ಲಿ ಸಭೆ ನಡೆಸಿ, ಹೆಣ್ಮಕ್ಕಳನ್ನು ಕರೆದುಕೊಂಡು ಹೋಗಿ ಊಟ ಕೊಡಿಸುತ್ತಿದ್ದ. ಸಭೆಯಲ್ಲಿ 50-100 ಜನ ಸೇರಿದ್ದರೆಂದು ನಕಲಿ ಬಿಲ್ ತಯಾರಿಸಿ ಸರಕಾರಕ್ಕೆ ಸಲ್ಲಿಸುತ್ತಿದ್ದ. ಸಭೆಗೆ ಐವತ್ತು- ನೂರು ಜನರು ಬರುತ್ತಿದ್ದುದು ಯಾಕೆ, ಈತನ ಯಕ್ಷಗಾನ ನೋಡೋದಿಕ್ಕೆ ಬರುತ್ತಿದ್ದರಾ ?” ಎನ್ನುತ್ತಾ ಯಕ್ಷಗಾನದ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದಾನೆ.  

- Advertisement -

ಕರಾವಳಿಯಲ್ಲಿ ಯಕ್ಷಗಾನಕ್ಕೆ ತನ್ನದೇ ಗೌರವವಿದೆ. ಕಲಾರಾಧಕರು ಈ ಕುರಿತು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವೈದ್ಯನ ಕಾಮಕಾಂಡವನ್ನು ವಿವರಿಸುವಾಗ ಜನರು ಗೌರವ ಕೊಡುವ ಯಕ್ಷಗಾನವನ್ನು ಟಿವಿ ಆ್ಯಂಕರ್ ಯಾಕೆ ಎಳೆದು ತಂದಿದ್ದಾರೆ  ಎಂದವರು ಪ್ರಶ್ನಿಸಿದ್ದಾರೆ. ಟಿವಿ ಆ್ಯಂಕರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಲಾಭಿಮಾನಿಗಳು ಆಗ್ರಹಿಸಿದ್ದಾರೆ.      

Join Whatsapp