ವಿವಾಹಿತ ಗ್ರಾಮ ಲೆಕ್ಕಿಗನನ್ನು ಮದುವೆಯಾದ ತಹಶೀಲ್ದಾರ್!

Prasthutha|

ಚಿಕ್ಕಮಗಳೂರು: ವಿವಾಹಿತ ಗ್ರಾಮಲೆಕ್ಕಿಗನನ್ನು ತಹಶೀಲ್ದಾರ್‍ ಮದುವೆಯಾಗಿದ್ದು, ತಹಶೀಲ್ದಾರ್‌ಗೆ ನೋಟಿಸ್‍ ಜಾರಿಮಾಡಲಾಗಿದೆ.

- Advertisement -

ಗ್ರಾಮಲೆಕ್ಕಿಗ ಡಿ.ಟಿ.ಶ್ರೀನಿಧಿ ಎಂಬವರನ್ನು ಎನ್‍.ಆರ್.ಪುರ ತಹಶೀಲ್ದಾರ್ ಸಿ.ಜಿ.ಗೀತಾ ವಿವಾಹವಾಗಿದ್ದಾರೆ. ಅದಕ್ಕೆ ಗೀತಾ ಅವರಿಗೆ ಜಿಲ್ಲಾಧಿಕಾರಿ ಶೋಕಾಸ್ ನೋಟಿಸ್ ನೀಡಿದ್ದಾರೆ.

ವಿವಾಹಿತ ಶ್ರೀನಿಧಿ ಅವರನ್ನು ಮದುವೆಯಾಗಿವುದಕ್ಕೆ ನಿಮ್ಮ ಸಮರ್ಥನೆ ಏನು? ಉಪನೋಂದಣಾಧಿಕಾರಿ ಕಚೇರಿಯಲ್ಲಿ ಸಲ್ಲಿಸಿರುವ ವಿವಾಹ ಮನವಿ ಅರ್ಜಿಯಲ್ಲಿ ಕಾಲಂ 4(ಜಿ) ನಲ್ಲಿ ನೀವು ‘ಅವಿವಾಹಿತೆ’ ಎಂದು ಮಾಹಿತಿ ನೀಡಿದ್ದೀರಿ, ಅದಕ್ಕೆ ನಿಮ್ಮ ವಿವರಣೆ ಏನು? ಎಂದು ನೋಟಿಸ್‍ನಲ್ಲಿ ಕೇಳಿದ್ದಾರೆ.

- Advertisement -

ನೋಟಿಸ್‌ ತಲುಪಿದ ಏಳು ದಿನಗಳೊಳಗೆ ಸಮರ್ಥನೆ ನೀಡಬೇಕು. ತಪ್ಪಿದರೆ ನಿಯಮಾನುಸಾರ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ಇವರಿಬ್ಬರೂ ಎನ್‌.ಆರ್‌.ಪುರದ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಈ ವರ್ಷ ಜುಲೈ 19ರಂದು ನೋಂದಣಿ ವಿವಾಹ ಮಾಡಿಕೊಂಡಿದ್ದಾರೆ ಎಂದು ಶ್ರೀನಿಧಿ ಪತ್ನಿ ದೂರು ನೀಡಿದ್ದರು.

`ದಾವಣಗೆರೆಯ ಉಪನೋಂದಣಾಧಿಕಾರಿ ಕಚೇರಿಯಲ್ಲಿ 2006ರಲ್ಲಿ ಶ್ರೀನಿಧಿ ಅವರೊಂದಿಗೆ ನನ್ನ ವಿವಾಹವಾಗಿತ್ತು. ನಮಗೆ ಇಬ್ಬರು ಮಕ್ಕಳು ಇದ್ದಾರೆ. ಪತಿ ಶ್ರೀನಿಧಿ ಮಾನಸಿಕ, ದೈಹಿಕ ಹಿಂಸೆ ನೀಡುತ್ತಿದ್ದರಿಂದ ಕಡೂರು ಠಾಣೆಯಲ್ಲಿ ದೂರು ದಾಖಲಿಸಿದ್ದೆ. ಮತ್ತೆ ರಾಜಿ ಮೂಲಕ ಒಂದಾಗಿದ್ದೆವು. ಶ್ರೀನಿಧಿ ಅವರು ಹಿರಿಯ ಸಿವಿಲ್‌ ಕೋರ್ಟ್‌ನಲ್ಲಿ ವಿವಾಹ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದಾರೆ ಎಂದು ಅವರ ಪತ್ನಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ನೋಟಿಸ್ ಜಾರಿ ಕುರಿತು ಪ್ರತಿಕ್ರಿಯಿಸಿರುವ ತಹಶೀಲ್ದಾರ್ ಗೀತಾ, ನನಗೆ ನೋಟಿಸ್ ತಲುಪಿಲ್ಲ. ನೋಟೀಸು ಕೈ ಸೇರಿದ ನಂತರ ಪ್ರಶ್ನೆಗೆ ಉತ್ತರ ನೀಡುತ್ತೇನೆ ಎಂದು ಹೇಳಿದ್ದಾರೆ.



Join Whatsapp