ಎಂಟು ವರ್ಷಗಳಿಂದ ಬಾಲ್ಯ ವಿವಾಹ ಮುಕ್ತ ಜಿಲ್ಲೆಯಾಗಿರುವ ಉಡುಪಿ

Prasthutha|

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಕಳೆದ 8 ವರ್ಷಗಳಿಂದ ಒಂದೇ ಒಂದು ಬಾಲ್ಯ ವಿವಾಹ ಪ್ರಕರಣ ವರದಿಯಾಗಿಲ್ಲ. ಕರ್ನಾಟಕ ರಾಜ್ಯದಲ್ಲಿ ಬಾಲ್ಯ ವಿವಾಹ ಸಂಪೂರ್ಣ ನಿಂತು ಹೋಗಿರುವ ಜಿಲ್ಲೆ ಎಂಬ ಹೆಗ್ಗಳಿಕೆಗೆ ಉಡುಪಿ ಪಾತ್ರವಾಗಿದೆ.

- Advertisement -


ಹೆಣ್ಣು ಮಕ್ಕಳನ್ನು ಎಸ್ಸೆಸ್ಸೆಲ್ಸಿವರೆಗಾದರೂ, ಸಾಧ್ಯವಾದರೆ ಹೆಚ್ಚು ಓದಿಸುವ ಪರಿಪಾಠ ಜಿಲ್ಲೆಯಲ್ಲಿ ಸಾಮಾನ್ಯವಾಗಿದೆ. ಇದರಿಂದ ಬಾಲ್ಯ ವಿವಾಹ ದೂರವಾಗಿದೆ. ಆದರೆ ಇತರ ಜಿಲ್ಲೆಗಳಿಂದ ಅದೂ ಉತ್ತರ ಕರ್ನಾಟಕದಿಂದ ಬಂದು ನೆಲೆಸಿದವರ ತೊಂದರೆ ಇದೆ. ಅವರು ಅವರೂರಲ್ಲೇ ಬೇಗ ಮದುವೆಯಾಗಿ ಇಲ್ಲಿ ಬಂದು ನೆಲೆಸುತ್ತಾರೆ ಎಂಬುದು ಅಧಿಕಾರಿಗಳ ಅಭಿಪ್ರಾಯ.


ಉಡುಪಿ ಜಿಲ್ಲೆಯಲ್ಲಿ ಕಳೆದ ಎಂಟು ವರ್ಷಗಳಿಂದ ಯಾವುದೇ ಬಾಲ್ಯ ವಿವಾಹ ವರದಿಯಾಗಿಲ್ಲ. 2017ರಲ್ಲಿ ತಾಂತ್ರಿಕವಾಗಿ ಬಾಲ್ಯ ವಿವಾಹ ಎನಿಸುವ ಮದುವೆ ಪೆರಂಪಳ್ಳಿಯಲ್ಲಿ ನಡೆಯಲಿತ್ತು. ಅದನ್ನು ಆಗಿನ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಡಿ. ಡಿ. ಗ್ರೇಸಿಯವರು ತಡೆದಿದ್ದರು. ಅದು ತಾಂತ್ರಿಕವಾಗಿ ಮಾತ್ರ ಬಾಲ್ಯ ವಿವಾಹ ಆಗುತ್ತಿತ್ತು ಏಕೆಂದರೆ ಆಗ ಹುಡುಗಿಗೆ 17 ವರುಷ, 11 ತಿಂಗಳು, 16 ದಿವಸ ಆಗಿತ್ತು.

Join Whatsapp