ಎಕ್ಸ್ ಪ್ರೆಸ್ ರೈಲಿಗೆ ಲಾರಿ ಡಿಕ್ಕಿ: ತಪ್ಪಿದ ಅನಾಹುತ

Prasthutha|

ಬೆಂಗಳೂರು: ಆನೇಕಲ್ ನ ಆವಲಹಳ್ಳಿ ಬಳಿ ನಿನ್ನೆ ರಾತ್ರಿ ಟಿಪ್ಪರ್ ಲಾರಿಗೆ ಮೈಸೂರು-ಚೆನ್ನೈ ಎಕ್ಸ್ ಪ್ರೆಸ್ ರೈಲು ಡಿಕ್ಕಿ ಹೊಡೆದು ಲಾರಿ ಮೂರು ಭಾಗಗಳಾಗಿದ್ದರೆ, ರೈಲಿನ ಇಂಜಿನ್ ನಜ್ಜುಗುಜ್ಜಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಉಂಟಾಗಿಲ್ಲ.
ಆನೇಕಲ್ ನ ಆವಲಹಳ್ಳಿ ಬಳಿ ರಾತ್ರಿ 9 ಗಂಟೆಗೆ ಎಕ್ಸ್ ಪ್ರೆಸ್ ರೈಲಿಗೆ ಅಡ್ಡವಾಗಿ ಟಿಪ್ಪರ್ ಬಂದಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.


ಈ ರಸ್ತೆಯನ್ನು ದಶಕಗಳ ಹಿಂದೆಯೇ ಬಳಸಲು ಬಿಟ್ಟಿದ್ದರು. ಹುಸ್ಕೂರು ರೈಲಿನ ಹಳಿಯ ಅಂಡರ್ ಪಾಸ್ ದ್ವಿಪಥ ರೈಲ್ವೆ ಕಾಮಗಾರಿ ಚಾಲನೆಯಲ್ಲಿದ್ದು, ಉಳಿದಂತೆ ಇದ್ದ ಕಚ್ಚಾ ರಸ್ತೆ ಮಳೆಗೆ ಹಾಳಾಗಿದೆ. ಹಳೆಯ ರಸ್ತೆಯ ಮೂಲಕ ಟಿಪ್ಪರ್ ಲಾರಿ ರೈಲ್ವೆ ಹಳಿಯನ್ನು ದಾಟುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ರೈಲು ಶಬ್ಧ ಮಾಡದೇ ವೇಗವಾಗಿ ಬಂದಿದ್ದನ್ನು ಚಾಲಕ ನೋಡದೆ ಮುನ್ನುಗ್ಗಿದಾಗ ಟಿಪ್ಪರ್ ಮುಂದಿನ ಭಾಗ ರೈಲಿಗೆ ಸಿಲುಕಿದೆ.

- Advertisement -


ಸ್ಥಳಕ್ಕೆ ಬೈಯ್ಯಪ್ಪನಹಳ್ಳಿ ರೈಲ್ವೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿದ್ದಾರೆ. ಹೆಬ್ಬಗೋಡಿ ಪೊಲೀಸರು ಲಾರಿಯನ್ನು ರಸ್ತೆಯಿಂದ ತೆರವುಗೊಳಿಸಿದ್ದಾರೆ.

- Advertisement -