ಖುತುಬ್ ಮಿನಾರ್ ಜಾಗದಲ್ಲೂ ದೇವಸ್ಥಾನ ಇತ್ತಂತೆ! : ದೆಹಲಿ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಕೆ

Prasthutha|

ನವದೆಹಲಿ : ತಾಜ್ ಮಹಲ್ ಅನ್ನು ತೇಜೋ ಮಹಲ್ ಎಂದದ್ದಾಯಿತು, ಈಗ ಖುತುಬ್ ಮಿನಾರ್ ಇರುವ ಜಾಗದಲ್ಲಿ ದೇವಸ್ಥಾನ ಇತ್ತು ಎಂದು ಇಬ್ಬರು ನ್ಯಾಯವಾದಿಗಳು ದೆಹಲಿ ನ್ಯಾಯಾಲಯವೊಂದರಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಖುತುಬ್ ಮಿನಾರ್ ಪ್ರದೇಶದ 12ನೇ ಶತಮಾನದ ಖುವ್ವಾತ್-ಉಲ್-ಇಸ್ಲಾಮ್ ಮಸೀದಿಯಿರುವ ಜಾಗದಲ್ಲಿ 27 ದೇವಸ್ಥಾನಗಳಿದ್ದವು. ಆ ದೇವಸ್ಥಾನಗಳನ್ನು ಮರು ಸ್ಥಾಪಿಸಿ, ಅಲ್ಲಿ ಹಿಂದೂ ಮತ್ತು ಜೈನರಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಬೇಕೆಂದು ಅರ್ಜಿದಾರರು ಆಗ್ರಹಿಸಿದ್ದಾರೆ.  

- Advertisement -

ಜೈನ ತೀರ್ಥಂಕರ ರಿಷಭ ದೇವ ಮತ್ತು ಹಿಂದೂ ದೇವರು ವಿಷ್ಣು ಪರವಾಗಿ ನ್ಯಾಯವಾದಿಗಳಾದ ಹರಿಶಂಕರ್ ಜೈನ್ ಮತ್ತು ರಂಜನಾ ಅಗ್ನಿಹೋತ್ರಿ ಎಂಬವರು ಅರ್ಜಿ ಸಲ್ಲಿಸಿದ್ದಾರೆ.

ಮೊಘಲ್ ಅರಸ ಖುತುಬುದ್ದೀನ್ ಐಬಕ್ ಆದೇಶದ ಮೇರೆಗೆ ಈ ಪ್ರದೇಶದಲ್ಲಿದ್ದ 27 ಹಿಂದೂ ಮತ್ತು ಜೈನ ದೇವಾಲಯಗಳನ್ನು ನಾಶ ಮಾಡಲಾಗಿದೆ ಎಂದು ಅರ್ಜಿದಾರರು ಪ್ರತಿಪಾದಿಸಿದ್ದಾರೆ. ದೇವಸ್ಥಾನವಿದ್ದ ಪ್ರದೇಶದಲ್ಲೇ ಕೆಲವು ನಿರ್ಮಾಣಗಳನ್ನು ಮಾಡಿ, ಅದಕ್ಕೆ ‘ಖುವ್ವಾತ್-ಉಲ್-ಇಸ್ಲಾಮ್ ಮಸೀದಿ’ ಎಂದು ನಾಮಕರಣ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ. 

ಖುವ್ವಾತ್-ಉಲ್-ಇಸ್ಲಾಮ್ ಮಸೀದಿಯನ್ನು ರಾಷ್ಟ್ರೀಯ ಪ್ರಾಮುಖ್ಯತೆಯ ಸ್ಮಾರಕವಾಗಿ ಘೋಷಿಸಲಾಗಿದೆ. ಪ್ರಸ್ತುತ ಭಾರತೀಯ ಪುರಾತತ್ವಶಾಸ್ತ್ರ ಇಲಾಖೆ ಅದನ್ನು ನಿರ್ವಹಿಸುತ್ತಿದೆ.   

- Advertisement -