ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ತಾಯಿಗೇ ಎರಡೂವರೆ ಕೋಟಿ ವಂಚನೆ ಮಾಡಿದ ವ್ಯಕ್ತಿಯ ಬಂಧನ!

Prasthutha|

ನಾಗ್ಪುರ : ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್. ಎ. ಬೊಬ್ಡೆ ಅವರ ತಾಯಿಗೇ ಎರಡೂವರೆ ಕೋಟಿ ರೂ. ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಸಿಜೆಐ ಬೊಬ್ಡೆ ಅವರ ತಾಯಿ ಮುಕ್ತಾ ಬೊಬ್ಡೆ ವಂಚನೆಗೊಳಗಾದವರು.

- Advertisement -

ಕುಟುಂಬದ ಆಸ್ತಿಯ ಉಸ್ತುವಾರಿ ವಹಿಸಿಕೊಂಡಿರುವಾತನೇ ಈ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ತಪಸ್ ಘೋಷ್ (49) ಎಂಬಾತನನ್ನು ಬಂಧಿಸಿದ್ದಾರೆ.

ನಾಗ್ಪುರದ ಆಕಾಶವಾಣಿ ವೃತ್ತದ ಸಮೀಪ ರುವ ಹಾಲ್ ನ ಮಾಲಿಕತ್ವವನ್ನು ಮುಕ್ತಾ ಹೊಂದಿದ್ದಾರೆ. ಅದನ್ನು ಕಾರ್ಯಕ್ರಮಗಳನ್ನು ಆಯೋಜಿಸಲು ಬಾಡಿಗೆಗೆ ನೀಡಲಾಗುತಿತ್ತು. ಅದರ ಉಸ್ತುವಾರಿಗಾಗಿ 2007ರಲ್ಲಿ ತಪಸ್ ನನ್ನು ನೇಮಕ ಮಾಡಲಾಗಿದೆ. ಆತನೇ ಅದರ ಸಂಪೂರ್ಣ ವ್ಯವಹಾರ ನೋಡಿಕೊಳ್ಳುತ್ತಿದ್ದ. ಹಾಲ್ ನ ಬುಕಿಂಗ್ ಮತ್ತು ಇತರ ವ್ಯವಹಾರವೆಲ್ಲಾ ಆತನೇ ನೋಡಿಕೊಳ್ಳುತ್ತಿದ್ದ.

- Advertisement -

ಮುಕ್ತಾ ಅವರಿಗೆ ವಯಸ್ಸಾಗಿದ್ದುದರಿಂದ ಅವರು ವ್ಯವಹಾರ ನೋಡಿಕೊಳ್ಳುತ್ತಿರಲಿಲ್ಲ. ಇದನ್ನು ದುರುಪಯೋಗ ಪಡಿಸಿಕೊಂಡ ತಪಸ್, ನಕಲಿ ರಶೀದಿಗಳ ಮೂಲಕ 2.5 ಕೋಟಿ ರೂ. ವಂಚಿಸಿದ್ದಾನೆ ಎಂದು ಆರೋಪಿಸಲಾಗಿದೆ.  

Join Whatsapp