ವಿದ್ಯಾರ್ಥಿಗಳ ವಾಟ್ಸಾಪ್ ಗ್ರೂಪ್’ಗೆ ‘ಪೋರ್ನ್ ವೀಡಿಯೋ’ ಶೇರ್ ಮಾಡಿದ ಶಿಕ್ಷಕ..!

Prasthutha|

ಚೆನ್ನೈ: ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ವಾಟ್ಸಾಪ್ ಗ್ರೂಪ್’ಗೆ ಗಣಿತ ಶಿಕ್ಷಕನೋರ್ವ ಪೋರ್ನ್ ವೀಡಿಯೋ ಕಳುಹಿಸಿ, ಜೈಲು ಪಾಲಾಗಿರುವ ಘಟನೆ ಚೆನ್ನೈ ನಲ್ಲಿ ನಡೆದಿದೆ. ಅಂಬಟ್ಟೂರ್ ನಿವಾಸಿಯಾದ ಗಣಿತ ಶಿಕ್ಷಕ ಆರ್. ಮತಿವಣ್ಣನ್ ಎಂಬಾತ ರಾತ್ರಿ ವೇಳೆ ಕುಡಿದ ಮತ್ತಿನಲ್ಲಿ, ಆನ್ಲೈನ್ ತರಗತಿಗಾಗಿ ರಚಿಸಲಾಗಿದ್ದ ವಿದ್ಯಾರ್ಥಿಗಳ ವಾಟ್ಸಾಪ್ ಗ್ರೂಪ್’ಗೆ ಅಶ್ಲೀಲ ವೀಡಿಯೋ ಕಳಿಸಿದ್ದಾನೆ.

- Advertisement -

ಬೆಳಗ್ಗೆ ಹೊತ್ತಿನಲ್ಲಿ ಆನ್ಲೈನ್ ತರಗತಿಗಾಗಿ ವಿದ್ಯಾರ್ಥಿಗಳು ಮೊಬೈಲ್ ತೆಗೆದು ನೋಡಿದ ವೇಳೆ ಶಿಕ್ಷಕನ ‘ಅವಾಂತರ’ ಎಲ್ಲರಿಗೂ ಗೊತ್ತಾಗಿದೆ. ಕೂಡಲೇ ಪೋಷಕರ ಮೂಲಕ ವಿದ್ಯಾರ್ಥಿಗಳು ಅಧ್ಯಾಪಕನ ವಿರುದ್ಧ ಕಾಲೇಜು ಆಡಳಿತ ಮಂಡಳಿಗೆ ದೂರು ಸಲ್ಲಿಸಿದ್ದಾರೆ.

ಮದ್ಯಪಾನ ಮಾಡಿದ ಅಮಲಿನಲ್ಲಿ ವಿದ್ಯಾರ್ಥಿಗಳ ಗ್ರೂಪ್’ಗೆ ವೀಡಿಯೋ ಶೇರ್ ಮಾಡಿರುವುದಾಗಿ ಮತಿವಣ್ಣನ್ ಆಡಳಿತ ಮಂಡಳಿಯ ಎದುರು ಹೇಳಿಕೆ ನೀಡಿದ್ದಾನೆ. ಸದ್ಯ ಮತಿವಣ್ಣನ್’ನನ್ನು ಬಂಧಿಸಿರುವ ಪೊಲೀಸರು, ಪೋಕ್ಸೊ ಮತ್ತು ಐಟಿ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

- Advertisement -

ಮತಿವಣ್ಣನ್ ದಶಕಗಳಿದಲೂ ಇದೇ ಖಾಸಗಿ ಕಾಲೇಜಿನಲ್ಲಿ ಅಧ್ಯಾಪಕನಾಗಿ ಕೆಲಸ ಮಾಡುತ್ತಿದ್ದ. ಪಬ್ಲಿಕ್ ಪರೀಕ್ಷೆಗೆ ಸಿದ್ಧರಾಗುತ್ತಿದ್ದ ವಿದ್ಯಾರ್ಥಿಗಳಿಗೆ ಕೋವಿಡ್ ಕಾರಣದಿಂದಾಗಿ ಆನ್ಲೈನ್’ನಲ್ಲೇ ತರಗತಿ ನಡೆಯುತ್ತಿತ್ತು.

Join Whatsapp