ಒಂದು ಕಪ್​ ಟೀ ಬೆಲೆ ಸಾವಿರ ರೂಪಾಯಿ; ಟೀಪುಡಿ ಬೆಲೆ ಕೇಳಿದ್ರಂತೂ ಹುಬ್ಬೇರುವಿರಿ!

Prasthutha|

ಕೋಲ್ಕತ್ತಾ : ಒಂದು ಕಪ್​ ಟೀ ಬೆಲೆ 10 ರೂಪಾಯಿ ಇರಬಹುದು. ಕೆಲವಡೆ 20 ರೂಪಾಯಿ ಸಹ ತೆಗೆದುಕೊಳ್ಳಬಹುದು. ಫೈವ್​ಸ್ಟಾರ್​ ಹೋಟೆಲ್​​ಗಳಲ್ಲಿ 50 ರಿಂದ 100 ರೂ. ಬಿಲ್​ ಮಾಡಬಹುದು. ಕೋಲ್ಕತದಲ್ಲಿರುವ ಟೀ ಸ್ಟಾಲೊಂದರಲ್ಲಿ ಕನಿಷ್ಠ 100 ರೂ.ನಿಂದ ಗರಿಷ್ಠ 1000 ರೂ.ವರೆಗೂ ಟೀ ಸಿಗುತ್ತದೆ. 1000 ರೂ. ಟೀನ ವಿಶೇಷತೆಯೆಂದರೆ ಅದಕ್ಕೆ ಬಳಸುವ ಟೀಪುಡಿ ಕೆಜಿಗೆ 3 ಲಕ್ಷ ರೂಪಾಯಿ!

- Advertisement -

ಈ ದುಬಾರಿ ಟೀ ಹೆಸರು ಬೋ-ಲೇ. ಶಾಪ್​ನ ಮಾಲೀಕನ ಹೆಸರು ಪರ್ತ್​ ಪ್ರತೀಮ್​ ಗಂಗೂಲಿ. ಇವರು ಅನೇಕ ವರ್ಷಗಳಿಂದ ಈ ಸ್ಟಾಲ್​ ಆರಂಭಿಸಿದ್ದು, ವೈವಿಧ್ಯಮಯವಾದ ಟೀಗಳನ್ನು ಮಾರಾಟ ಮಾಡುತ್ತಾ ಬಂದಿದ್ದಾರೆ.

ಗಂಗೂಲಿ 2014ರಲ್ಲಿ ನಿರ್ಜಾಸ್​ ಹೆಸರಿನಲ್ಲಿ ಸಣ್ಣ ಟೀ ಸ್ಟಾಲ್​ ತೆರೆದರು. ಆದರೆ, ಇಂದು ಬಹುದೊಡ್ಡದಾಗಿ ಬೆಳೆದಿದೆ. ಸಿಲ್ವರ್​ ಸ್ಯು ವೈಟ್​ ಟೀ, ಲ್ಯಾವೆಂಡರ್​ ಟೀ, ಹಿಬಿಕಸ್​ ಟೀ, ವೈನ್​ ಟೀ, ಬಾಸಿಲ್​ ಜಿಂಜರ್​ ಟೀ, ಕಾರ್ನ್​ಬ್ರೆಡ್​ ಟೀ ಮತ್ತು ರುಬಿಯೋ ಟೀ ಸೇರಿದಂತೆ ಅನೇಕ ಟೀ ವೆರೈಟಿಗಳು ದೊರೆಯುತ್ತದೆ.

ಸುಮಾರು 7 ವರ್ಷಗಳ ವರೆಗೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿದ ಗಂಗೂಲಿ ಬಳಿಕ ತನ್ನದೇ ಸಣ್ಣ ಟೀ ಅಂಗಡಿಯನ್ನು ತೆರೆಯುತ್ತಾರೆ. ಬಳಿಕ ಅಭಿವೃದ್ಧಿ ಹೊಂದುತ್ತಾ ಇಂದು ಕೋಲ್ಕತದಲ್ಲೇ ತನ್ನ ಬ್ರ್ಯಾಂಡ್​ ಅನ್ನು ಈ ಟೀ ಸ್ಟಾಲ್​ ನಿರ್ಮಿಸಿಕೊಂಡಿದೆ. 

- Advertisement -