ಬಿಜೆಪಿ ಸಂಸದ ಕೊರೊನಾಗೆ ಬಲಿ
Prasthutha: March 2, 2021

ಭೋಪಾಲ್ : ಕೋವಿಡ್-19 ಪಾಸಿಟಿವ್ ಸೋಂಕಿನಿಂದ ಗುರುಗ್ರಾಮ್ ಮೇದಾಂತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯ ಬಿಜೆಪಿ ಸಂಸದ ನಂದಕುಮಾರ್ ಸಿಂಗ್ ಚೌಹಾಣ್ ಅವರು ಮೃತಪಟ್ಟಿದ್ದಾರೆ. 69 ವರ್ಷ ವಯಸ್ಸಿಯ ಚೌಹಾಣ್ ಅವರು ಈ ಕ್ಷೇತ್ರದಿಂದ ಆರು ಬಾರಿ ಬಿಜೆಪಿ ಸಂಸದರಾಗಿ ಆಯ್ಕೆಯಾಗಿದ್ದರು.
ಸೋಮವಾರ ರಾತ್ರಿ ತೀವ್ರ ಉಸಿರಾಟ ತೊಂದರೆಯುಂಟಾಗಿ ಆರೋಗ್ಯದ ಸ್ಥಿತಿ ತೀವ್ರ ಹದಗೆಟ್ಟಿತ್ತು ಎಂದು ಕುಟುಂಬ ಮೂಲಗಳು ತಿಳಿಸಿವೆ.
ಇಂದು ಮೃತಪಟ್ಟ ಚೌಹಾಣ್ ಅವರು ಪತ್ನಿ, ಒಬ್ಬ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಅವರ ಅಂತಿಮ ಸಂಸ್ಕಾರವು ಬುರ್ಹಾನ್‍ಪುರ ಜಿಲ್ಲೆಯ ಶಾಹ್ಪುರದ ತಮ್ಮ ಪೂರ್ವಜರ ಸ್ಥಳದಲ್ಲಿ ಬುಧವಾರ ನೆರವೇರಲಿದೆ ಎಂದು ತಿಳಿದುಬಂದಿದೆ.
