ಕಾರ್ಯಕರ್ತರ ಮೇಲೆ ಕಲ್ಲೆಸೆದ ತಮಿಳುನಾಡು ಸಚಿವ!

Prasthutha|

ಕಾರ್ಯಕ್ರಮವೊಂದರಲ್ಲಿ ತನಗೆ ಕುರ್ಚಿ ತರಲು ತಡ ಮಾಡಿದ ಕಾರ್ಯಕರ್ತರ ವಿರುದ್ಧ ತಾಳ್ಮೆ ಕಳೆದುಕೊಂಡ ತಮಿಳುನಾಡಿನ ಸಚಿವರೊಬ್ಬರು ಕಲ್ಲೆಸೆದ ಘಟನೆ ತಿರುವಳ್ಳೂರಿನಲ್ಲಿ ನಡೆದಿದೆ.

ಈ ಘಟನೆಯ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಭಾರೀ ವೈರಲಾಗಿದೆ.

- Advertisement -

ಹಾಲು ಮತ್ತು ಡೈರಿ ಅಭಿವೃದ್ಧಿ ಸಚಿವ ಎಸ್‌ಎಂ ನಾಸರ್ ಅವರು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಭಾಗವಹಿಸಲಿರುವ ಕಾರ್ಯಕ್ರಮದ ಬಗ್ಗೆ ವ್ಯವಸ್ಥೆಗಳನ್ನು ಪರಿಶೀಲಿಸುತ್ತಿದ್ದಾಗ ಕಾರ್ಯಕರ್ತರ ಮೇಲೆ ಕಲ್ಲು ಎಸೆದಿದ್ದಾರೆ.

ಪಕ್ಷದ ಕಾರ್ಯಕರ್ತರು ತನಗೆ ಕುರ್ಚಿ ತರಲು ತಡ ಮಾಡಿದ್ದಾರೆ ಎಂದು ಕೋಪಗೊಂಡ ಸಚಿವರು ಕಾರ್ಯಕರ್ತರ ಮೇಲೆ ಕಲ್ಲು ಎಸೆದಿದ್ದಾರೆ.

- Advertisement -