ಪೆಟ್ರೋಲ್ ಬಂಕ್’ನ ಟ್ಯಾಂಕ್ ಕ್ಲೀನ್ ಮಾಡುತ್ತಿದ್ದಾಗ ಉಸಿರುಗಟ್ಟಿ ಇಬ್ಬರು ಕಾರ್ಮಿಕರು ಮೃತ್ಯು

Prasthutha|

ತುಮಕೂರು: ಪೆಟ್ರೋಲ್ ಬಂಕ್ ನ ತಳಹದಿಯ ಟ್ಯಾಂಕ್ ಕ್ಲೀನ್ ಮಾಡುತ್ತಿದ್ದಾಗ ಉಸಿರುಗಟ್ಟಿ ಇಬ್ಬರು ಕಾರ್ಮಿಕರು ಮೃತಪಟ್ಟ ದಾರುಣ ಘಟನೆ ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ಹಿಂಡಿಸ್ಕೆರೆ ಗೇಟ್ ಬಳಿ ನಡೆದಿದೆ.

- Advertisement -

ಮೃತ ಕೂಲಿ ಕಾರ್ಮಿಕರನ್ನು ತಮಿಳುನಾಡಿನ ವೇಲೂರು ರವಿ, ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಹಾರನಹಳ್ಳಿ ನಾಗರಾಜು ಎಂದು ಗುರುತಿಸಲಾಗಿದೆ.

ಹಿಂಡಿಸ್ಕೆರೆ ಗೇಟ್ ಬಳಿಯಲ್ಲಿರುವ ಪೆಟ್ರೋಲ್ ಬಂಕ್ ನ ತಳಹದಿಯಲ್ಲಿರುವ ಟ್ಯಾಂಕನ್ನು ಯಾವುದೇ ಸುರಕ್ಷತಾ ಸಲಕರಣೆಗಳಿಲ್ಲದೆ ಸ್ವಚ್ಛಗೊಳಿಸಲು ಹೋದ ಸಂದರ್ಭದಲ್ಲಿ ಉಸಿರಾಟದ ತೊಂದರೆಯಿಂದಾಗಿ ಈ ಘಟನೆಯು ನಡೆದಿದೆ ಎಂದು ತಿಳಿದು ಬಂದಿದೆ.

Join Whatsapp