ಹರಬ್ಬಿ ಸ್ಪೋರ್ಟ್ಸ್ ಎಫ್.ಎಫ್ ಸೀಸನ್-01 ಟ್ರೋಫಿಯನ್ನು ಮಡಿಲಿಗೇರಿಸಿದ ಫ್ರೆಂಡ್ಸ್ ಫಾರೆವರ್ ಕುಕ್ಕುವಳ್ಳಿ ತಂಡ

Prasthutha|

ಬುರೈದ (ಸೌದಿ ಅರೇಬಿಯಾ): 09/10/2022 ರಂದು ಸೌದಿ ಅರೇಬಿಯಾದ ಬುರೈದದಲ್ಲಿ ನಡೆದ ಹರಬ್ಬಿ ಸ್ಪೋರ್ಟ್ಸ್ ಪಂದ್ಯಕೂಟದಲ್ಲಿ ಮಿಂಚಿನ ಪ್ರದರ್ಶನ ನೀಡಿ ಸೆಮಿ ಫೈನಲ್ ಪಂದ್ಯಾಟದಲ್ಲಿ ಹರಬ್ಬಿ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿದ ಫ್ರೆಂಡ್ಸ್ ಫಾರೆವರ್ ಕುಕ್ಕುವಳ್ಳಿ ತಂಡ ನಜಮ್ ಫ್ರೆಂಡ್ಸ್ ತಂಡವನ್ನು ಮಣಿಸಿ ಹರಬ್ಬಿ ಟ್ರೋಪಿಯನ್ನು ತಮ್ಮ ಮಡಿಲಿಗೇರಿಸಿದೆ.

- Advertisement -

ಪಂದ್ಯಕೂಟದ ಉದ್ದಗಲಕ್ಕೂ ಲೆಫ್ಟಿ ನವ್ವ (ನವಾಝ್) ಮತ್ತು ಶಫೀಕ್ ಅರ್ಲಪದವು ಅತ್ಯುತ್ತಮ ಹೊಡೆತಗಳ ಮೂಲಕ ಪ್ರೇಕ್ಷಕರ ಮನ ರಂಜಿಸಿದರು.
ಜಾಬಿರ್ ಕೆಕನಾಜೆ ಹಾಗೂ ಶಾಫಿ ಪೆರುವಾಯಿ ಮಾಲಕತ್ವ ದಲ್ಲಿ ಫ್ರೆಂಡ್ಸ್ ಫಾರೆವರ್ ಕುಕ್ಕುವಳ್ಳಿ ತಂಡ ಹರಬ್ಬಿ ಎಫ್ .ಎಫ್ ಟ್ರೋಪಿಯನ್ನು ವಶಪಡಿಸಿಕೊಂಡಿದೆ.

Join Whatsapp