ತಮಿಳುನಾಡು | 10 ರಿಂದ 12 ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲೆಗೆ ತೆರಳಲು ಅನುಮತಿ ನೀಡಿದ ಸರ್ಕಾರ: ನಿಯಮಾವಳಿ ಜಾರಿ

ತಮಿಳುನಾಡು, ಸೆ.24: ಕಲಿಕೆಯಲ್ಲಿ ಶಿಕ್ಷಕರ ಸಹಾಯ ಪಡೆಯುವ ಸಲುವಾಗಿ 10, 11 ಮತ್ತು 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಅಕ್ಟೋಬರ್ 1 ರಿಂದ ಸ್ವಯಂ ಪ್ರೇರಿತವಾಗಿ ಶಾಲೆಗೆ ಹಾಜರಾಗಲು ಪ್ರಮಾಣಿತ ಕಾರ್ಯಾಚರಣಾ ವಿಧಾನವನ್ನು (ಎಸ್‌ಒಪಿ) ತಮಿಳುನಾಡು ಸರ್ಕಾರ ಜಾರಿಗೊಳಿಸಿದೆ. ಕಂಟೋನ್ಮೆಂಟ್ ಝೋನ್‌ಗಳಿಂದ ಹೊರಗಿರುವ ಸರಕಾರಿ, ಸರ್ಕಾರಿ ಅನುದಾನಿತ ಅಥವಾ ಖಾಸಗಿ ಶಾಲೆಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಈ ಹೊಸ ಯೋಜನೆಯು ಅನ್ವಯಿಸುತ್ತದೆ.

- Advertisement -

ಆನ್‌ಲೈನ್ ತರಗತಿಗಳಲ್ಲಿ ಭಾಗಿಯಾಗಲು ಸಾಧ್ಯವಾಗದೇ ಹಲವು ವಿದ್ಯಾರ್ಥಿಗಳು ಆತ್ಮಹತ್ಯೆಗೈದಿರುವ ಘಟನೆಗಳು ವರದಿಯಾದ ಬೆನ್ನಿಗೆ ಸರಕಾರ ಈ ನಿರ್ಧಾರ ಕೈಗೊಂಡಿದೆ ಎಂಬುದಾಗಿ ವರದಿಯಾಗಿದೆ.

- Advertisement -