ಕಾಬೂಲ್: ತಾಲಿಬಾನ್ ಸರ್ಕಾರ ಅಂತಾರಾಷ್ಟ್ರೀಯ ಸಮುದಾಯದೊಂದಿಗೆ ಕೈ ಜೋಡಿಸಲು ಸಿದ್ಧವಿದೆ. ಆದರೆ ಇಸ್ಲಾಮ್’ಗೆ ವಿರುದ್ಧವಾಗಿದ್ದರೆ ಸಂಬಂಧ ಮುಂದುವರಿಸಲು ಸಾಧ್ಯವಿಲ್ಲ ಎಂದು ತಿಳಿಸಿದೆ.
ನಾವು ನಮ್ಮ ಕಾನೂನನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಅಲ್ಲಾಹ್, ಪ್ರವಾದಿ ಮುಹಮ್ಮದ್, ಖಲೀಫರು ಮತ್ತು ಸಹಚರರನ್ನು ಅನುಸರಿಸುತ್ತೇವೆ. ಇಸ್ಲಾಮ್’ಗೆ ವಿರುದ್ಧವಾದ ಯಾವುದೇ ಶಕ್ತಿಗಳಿಂದಲೂ ನಾವು ಏನನ್ನು ಸ್ವೀಕರಿಸುವುದಿಲ್ಲ ಎಂದು ಹಂಗಾಮಿ ಸಚಿವ ಮುಹಮ್ಮದ್ ಖಾಲಿದ್ ಹನಫಿ ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಸಮದಾಯವು ತಾಲಿಬಾನ್ ಮೇಲೆ ನಿರ್ಬಂಧ ಹೇರಿರುವ ನಡೆಯನ್ನು ಹನಫಿ ಅವರು ಘಝ್ನಿಗೆ ಭೇಟಿ ನೀಡಿದ ವೇಳೆ ಖಂಡಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ಈ ಮಧ್ಯೆ ಸರ್ಕಾರಿ ನೌಕರರು ಶರಿಯತ್ ಆಧಾರದಲ್ಲಿ ಕಾರ್ಯನಿರ್ವಹಿಸುವಂತೆ ಹಂಗಾಮಿ ಸಚಿವರು ಕರೆ ನೀಡಿದ್ದು, ಪ್ರಾಂತ್ಯಗಳು, ಜಿಲ್ಲೆಗಳು ಮತ್ತು ಸಚಿವಾಲಯಗಳಲ್ಲಿರುವ ಎಲ್ಲಾ ಉದ್ಯೋಗಿಗಳು ಇಸ್ಲಾಮಿಕ್ ಮೌಲ್ಯಗಳಿಗೆ ಅನುಗುಣವಾಗಿ ನಡೆಯಬೇಕು ಎಂದು ತಿಳಿಸಿದ್ದಾರೆ.
ತಾಲಿಬಾನ್ ಅಧಿಕಾರಕ್ಕೆ ಬಂದ ಬಳಿಕ ಮಹಿಳೆಯರು ಹಿಜಾಬ್ ಅನ್ನು ಶೇಕಡಾ 100 ರಷ್ಟು ಅನುಷ್ಠಾನಗೊಳಿಸುವ ಕಡೆಗೆ ಗಮನ ಹರಿಸುತ್ತಿದ್ದಾರೆ ಎಂದು ಅವರು ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.