ತರಬೇತಿ ವಿಮಾನ ಪತನ: ಯುವ ಮಹಿಳಾ ಪೈಲಟ್’ಗೆ ಗಾಯ

Prasthutha|

ಪುಣೆ: ತರಬೇತಿ ವಿಮಾನ ಟೇಕಾಫ್ ಆಗುತ್ತಿದ್ದಾಗ ಪತನಗೊಂಡ ಘಟನೆ ಇಂದಾಪುರ ತಾಲೂಕಿನ ಕಡಬನವಾಡಿ ಬಳಿ ನಡೆದಿದೆ.

- Advertisement -


ಬಾರಾಮತಿಯಲ್ಲಿ ಕಾರ್ವರ್ ಏವಿಯೇಷನ್ ಮೂಲಕ ಮಹಿಳಾ ಪೈಲಟ್ ಗೆ ತರಬೇತಿ ನೀಡಲಾಗುತ್ತಿತ್ತು. ಇಂದು ಬೆಳಗ್ಗೆ ಬಾರಾಮತಿ ನಿಲ್ದಾಣದಿಂದ ಟೇಕಾಫ್ ಆದ ವಿಮಾನವು ಕಡಬನವಾಡಿಯ ರೈತ ಬರ್ಹಟೆ ಎಂಬುವರ ಹೊಲದಲ್ಲಿ ಹಠಾತ್ತನೆ ಪತನಗೊಂಡಿದೆ.
ಘಟನೆಯ ಮಾಹಿತಿ ತಿಳಿದ ನೆರೆಯ ಪೊಂಡಾಕುಲೆ ಬಡಾವಣೆಯ ಯುವಕರು ಸ್ಥಳಕ್ಕಾಗಮಿಸಿ ಮಹಿಳಾ ಪೈಲಟ್ ಅವರನ್ನು ರಕ್ಷಿಸಿದ್ದಾರೆ. ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ವಿಮಾನಕ್ಕೆ ಹಾನಿಯಾಗಿದೆ.

Join Whatsapp