ಶಿಂಧೆ ಶೀಘ್ರದಲ್ಲೇ ಅಧಿಕಾರದಿಂದ ಕೆಳಗಿಳಿಯಲಿದ್ದಾರೆ ಎಂಬ ಬಿಜೆಪಿ ಮುಖ್ಯಸ್ಥರ ಹೇಳಿಕೆ ಉದ್ಧವ್ ಠಾಕ್ರೆಗೆ ವರದಾನ

Prasthutha|

ಮುಂಬೈ: ಏಕನಾಥ್ ಶಿಂಧೆ ಅವರನ್ನು ರಾಜ್ಯದ ಮುಖ್ಯಮಂತ್ರಿಯಾಗಿ ಪಕ್ಷವು ಅತ್ಯಂತ ಭಾರವಾದ ಹೃದಯದಿಂದ ಒಪ್ಪಿಕೊಂಡಿದೆ ಎಂಬ ಮಹಾರಾಷ್ಟ್ರದ ಬಿಜೆಪಿ ಮುಖ್ಯಸ್ಥ ಚಂದ್ರಕಾಂತ್ ಪಾಟೀಲ್ ಹೇಳಿಕೆಯು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಗೆ ಹೊಸತಾಗಿ ಅಧಿಕಾರಕ್ಕೆ ಬಂದ ಸಮ್ಮಿಶ್ರ ಸರ್ಕಾರವನ್ನು ಹೆಣೆಯಲು ವರದಾನವಾಗಲಿದೆ ಎಂದು ತಿಳಿದುಬಂದಿದೆ.

- Advertisement -

ಪಾಟೀಲ್ ಹೇಳಿಕೆಯು ಶಿಂಧೆ-ಬೆಜೆಪಿ ಸರ್ಕಾರ ಆರು ತಿಂಗಳಿಗಿಂತ ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ಸೂಚಿಸುತ್ತದೆ ಎಂದು ಠಾಕ್ರೆ ಬಣ ತಿಳಿಸಿದೆ. ಇನ್ನೊಂದೆಡೆ ಉಳಿದ 2.5 ವರ್ಷಗಳ ಕಾಲ ಶಿಂಧೆ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಮತ್ತು ಸರ್ಕಾರವು ಪೂರ್ಣಾವಧಿಯನ್ನು ಪೂರ್ಣಗೊಳಿಸುತ್ತದೆ ಎಂದು ಶಿವಸೇನೆಯ ಬಂಡಾಯ ಬಣ ಪ್ರತಿಪಾದಿಸಿದೆ.

ಈ ಕುರಿತು ಪ್ರತಿಕ್ರಿಯಿಸಿದ ಶಿವಸೇನೆಯ ವಕ್ತಾರ ಸಂಜಯ್ ರಾವುತ್, ಸತ್ಯವನ್ನು ಹೇಳಿದ್ದಕ್ಕಾಗಿ ನಾವು ಚಂದ್ರಕಾಂತ್ ದಾದಾ ಪಾಟೀಲ್ ಅವರನ್ನು ಅಭಿನಂಧಿಸಲು ಬಯಸುತ್ತೇವೆ. ತಾತ್ಕಾಲಿಕ ವ್ಯವಸ್ಥೆಗಾಗಿ ಏಕನಾಥ್ ಶಿಂಧೆ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಯಿತು ಮತ್ತು ಶೀಘ್ರದಲ್ಲೇ ಅವರು ಅಧಿಕಾರದಿಂದ ಕೆಳಗಿಳಿಯುತ್ತಾರೆ ಎಂದು ಅವರ ಮಾತು ಸೂಚಿಸುತ್ತದೆ. ಸಂಭ್ರಮಾಚರಣೆಯಲ್ಲಿರುವ ಶಿಂಧೆ ಬಣಕ್ಕೆ ಸದ್ಯದಲ್ಲಿಯೇ ಆಘಾತವಾಗಲಿದೆ ಎಂದು ತಿಳಿಸಿದ್ದಾರೆ.

- Advertisement -

ಶಿಂಧೆ ನೇತೃತ್ವದ 40 ಶಿವಸೇನಾ ಶಾಸಕರ ಬಂಡಾಯದಿಂದಾಗಿ ಮಹಾ ವಿಕಾಸ್ ಅಘಾಡಿ ಸರ್ಕಾರ ಪತನಗೊಂಡ ಬಳಿಕ ದೇವೆಂದ್ರ ಫಡ್ನವೀಸ್ ಅವರು ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಎಲ್ಲೆಡೆ ಊಹಿಸಲಾಗಿತ್ತು.

ಈ ಮಧ್ಯೆ ಶಿಂಧೆ ನೂತನ ಸರ್ಕಾರವನ್ನು ಮುನ್ನಡೆಸಲಿದ್ದಾರೆ ಎಂದು ಫಡ್ನವೀಸ್ ಘೋಷಿಸಿದ್ದು, ತಾನು ಸರ್ಕಾರದಿಂದ ಹೊರಗುಳಿಯುವುದಾಗಿ ತಿಳಿಸಿದ್ದರು. ಇದಾದ ಕೆಲವೇ ಹೊತ್ತಿನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ದೇವೇಂದ್ರ ಫಡ್ನಾವೀಸ್ ಅವರನ್ನು ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಘೋಷಿಸಿದರು.

Join Whatsapp