ಚೈನಾ ಬ್ಲೋಫಿಶ್‌ ಡ್ರೋನ್‌ ಖರೀದಿಗೆ ಮುಂದಾದ ತಾಲಿಬಾನ್‌| ಅಮೆರಿಕ ಆತಂಕ

Prasthutha|

ಕಾಬೂಲ್‌: ತಾಲಿಬಾನ್ ಸರಕಾರ ಚೀನಾದಿಂದ ಬ್ಲೋಫಿಶ್‌ ಡ್ರೋನ್‌ ಖರೀದಿಗೆ ಮುಂದಾಗಿದ್ದು, ಅಮೆರಿಕಾದ ಆತಂತಕ್ಕೆ ಕಾರಣವಾಗಿದೆ.

- Advertisement -

ಕೃತಕ ಬುದ್ಧಿಮತ್ತೆ ಅಳವಡಿಕೆಯ ಮೂಲಕ, ಗನ್‌ಗಳಿಂದ ಫೈರಿಂಗ್‌ ಮಾಡುವ, ಗ್ರೆನೇಡ್‌ಗಳನ್ನು ಎಸೆಯುವ ಸಾಮರ್ಥ್ಯವಿರುವ ಬ್ಲೋಫಿಶ್‌ ಡ್ರೋನ್‌ಗಳನ್ನು ತಾಲಿಬಾನ್ ಸರಕಾರ ಚೀನದಿಂದ ಖರೀದಿಸುವುದಕ್ಕೆ ಒಪ್ಪಂದ ಮಾಡಿಕೊಂಡಿದೆ ಎನ್ನಲಾಗಿದೆ.

ತಾಲಿಬಾನ್‌ಗೆ ಡ್ರೋನ್‌ಗಳ ರಫ್ತು ನಿರ್ಣಯವನ್ನು ಸಮರ್ಥಿಸಿದ ಚೀನಾ, ಉಗ್ರರನ್ನು ಸದೆಬಡಿಯಲು ತಾಲಿಬಾನ್ ಸರಕಾರಕ್ಕೆ ಈ ಡ್ರೋನ್‌ ಅಗತ್ಯವಿದೆ ಎಂದು ಹೇಳಿದೆ.  ಆದರೆ, ಈ ಬಗ್ಗೆ ಅಮೆರಿಕ ಆತಂಕ ವ್ಯಕ್ತ ಪಡಿಸಿದ್ದು, ಈ ರಫ್ತು ನಿರ್ಣಯ ಸರಿಯಲ್ಲ ಎಂದು ಹೇಳಿದೆ.

Join Whatsapp