ತಾಯಿಫ್: ಇಂಡಿಯನ್ ಸೋಶಿಯಲ್ ಫೋರಂನ ನೂತನ ಸಮಿತಿ ಅಸ್ತಿತ್ವಕ್ಕೆ

Prasthutha|

ಜಿದ್ದಾ: ಇಂಡಿಯನ್ ಸೋಶಿಯಲ್ ಫೋರಂ ಜಿದ್ದಾ ವಲಯದ ಅಧೀನದಲ್ಲಿರುವ ತಾಯಿಫ್ ನ ನೂತನ ಇಂಡಿಯನ್ ಸೋಶಿಯಲ್ ಫೋರಂ ಘಟಕ ವನ್ನು ಉಧ್ಘಾಟಿಸಲಾಯಿತು.

- Advertisement -


ತಾಯಿಫ್ ಇಂಡಿಯನ್ ಸೋಶಿಯಲ್ ಫೋರಂ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಸಿಫ್ ಗಂಜಿಮಠ ಉದ್ಘಾಟಿಸಿ ಮಾತನಾಡಿ, ಇಂಡಿಯನ್ ಸೋಶಿಯಲ್ ಫೋರಂ ಅನಿವಾಸಿ ಭಾರತೀಯರ ಸೇವಾ ಕಾರ್ಯದಲ್ಲಿ ತೊಡಗಿಕೊಂಡು ಕರ್ನಾಟಕ ಮತ್ತು ಇತರ ರಾಜ್ಯಗಳಲ್ಲಿ ಕಾರ್ಯಾಚರಿಸುತ್ತಿದ್ದು, ಅನಿವಾಸಿ ಭಾರತೀಯರ ಮೆಚ್ಚುಗೆಗೆ ಪಾತ್ರವಾಗಿರುವುದು ಕಳೆದ ಹತ್ತು ವರ್ಷಗಳ ನಮ್ಮ ಸೇವೆಯ ಫಲವಾಗಿದೆ ಎಂದರು.


ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ರಾಜ್ಯದಲ್ಲಿ ಶೇ.14ರಷ್ಟು ಜನಸಂಖ್ಯೆಯನ್ನು ಹೊಂದಿರುವ ಲಿಂಗಾಯಿತರಿಗೆ ಹಾಗೂ ಶೇ.12ರಷ್ಟು ಒಕ್ಕಲಿಗರಿಗೆ ತಮ್ಮದೇ ಜಾತಿಯ ಮುಖ್ಯಮಂತ್ರಿಯನ್ನು ಮಾಡಲು ಸಾದ್ಯವಾದರೆ, ರಾಜ್ಯದಲ್ಲಿ ಶೇಖಡಾ ಶೇ.13ರಷ್ಟಿರುವ ಮುಸಲ್ಮಾನರಿಗೆ ಕನಿಷ್ಠ ಪಕ್ಷ ಓರ್ವ ಸಂಸದರನ್ನು ಆಯ್ಕೆ ಮಾಡಲು ಯಾಕೆ ಸಾದ್ಯವಾಗುತ್ತಿಲ್ಲ ? ಈ ಕುರಿತು ನಾವು ಚಿಂತಿಸಬೇಕಿದೆ,’ನಮ್ಮಲ್ಲಿ ರಾಜಕೀಯವಾಗಿ ದೂರದೃಷ್ಟಿ ಇಲ್ಲದಿರುವುದೇ ಇದಕ್ಕೆ ಕಾರಣ ಮುಂದೆ ನಾವು ರಾಜಕೀಯವಾಗಿ ಮುನ್ನಲೆಗೆ ಬರಬೇಕಿದೆ’ ಎಂದರು.

- Advertisement -


ಮುಖ್ಯ ಅಥಿತಿಯಾಗಿ ಆಗಮಿಸಿದ ಇಂಡಿಯನ್ ಫ್ರೆಟರ್ನಿಟಿ ಫಾರಂ ಜಿಲ್ಲಾಧ್ಯಕ್ಷ ಆರಿಫ್ ಬಜ್ಪೆ ಮಾತನಾಡಿ, ”ಪ್ರಸಕ್ತ ಸನ್ನಿವೇಶದಲ್ಲಿ ದೇಶದಲ್ಲಿ ಮುಸಲ್ಮಾನರನ್ನು ಎರಡನೇ ದರ್ಜೆಯ ಪ್ರಜೆಗಳಾಗಿ ಪರಿಗಣಿಸಲಾಗುತ್ತಿದ್ದು, ಈ ಬೆಳವಣಿಗೆಗೆ ಮುಸಲ್ಮಾನರಲ್ಲಿ ರಾಜಕೀಯ ಮುತುವರ್ಜಿ ಇಲ್ಲದಾಗಿರುವುದೇ ಕಾರಣ, ದೇಶದಲ್ಲಿ ನಮ್ಮ ಹಕ್ಕು ಪಡೆಯಬೇಕಿದ್ದರೆ ಮುಂದೆ ನಾವು ರಾಜಕೀಯ ಪಕ್ವತೆಯನ್ನು ಮೈ ಗೂಡಿಸಬೇಕಾಗಿದೆ, ಈ ನಿಟ್ಟಿನಲ್ಲಿ ಇಂಡಿಯನ್ ಸೋಶಿಯಲ್ ಫೋರಂ ನ ಎಲ್ಲಾ ಸದಸ್ಯರ ಶ್ರಮ ಬಹು ಮುಖ್ಯವಾಗಿದೆ ಎಂದರು.


ತೌಸೀಫ್ ನಿಟ್ಟೆ ಕಾರ್ಯಕ್ರಮ ನಿರೂಪಿಸಿ ರಫೀಕ್ ಬುಡೋಲಿ ನೂತನ ಸಮಿತಿಯ ಪಧಾಧಿಕಾರಿಗಳನ್ನು ಪರಿಚಯಿಸಿದರು.
ತಾಯಿಫ್ ಘಟಕದ ನೂತನ ಪದಾಧಿಕಾರಿಗಳಾಗಿ ಆಯ್ಕೆಯಾದ ‘ಸಾಜಿದ್ ಗಂಜಿಮಠ ಘಟಕ ಅಧ್ಯಕ್ಷರಾಗಿ ನೇಮಕಗೊಂಡರೆ ಉಪಾಧ್ಯಕ್ಷರಾಗಿ ಝುಬೈರ್ ತುಂಬೆ ಹಾಗೂ ಜನಾಬ್ ಮಲಿಕ್ ಪ್ರಧಾನ ಕಾರ್ಯದರ್ಶಿಯಾಗಿಯೂ, ಮೊಯ್ದಿನ್ ಶಿವಮೊಗ್ಗ ಮತ್ತು ಇರ್ಫಾನ್ ಶಿವಮೊಗ್ಗ ಕಾರ್ಯದರ್ಶಿಗಳಾಗಿ ಆಯ್ಕೆಯಾದರು
ಪತ್ರಿಕಾ ಸಲಹೆಗಾರರಾಗಿ ರಹಿಮಾನ್ ಮಿತ್ತೂರ್ ಅವರನ್ನು ಸಮಿತಿ ಆಯ್ಕೆಮಾಡಿತು

Join Whatsapp