ರಜನಿ ಪಾಟೀಲ್ ಸಹಿತ ಆರು ಮಂದಿ ರಾಜ್ಯ ಸಭೆ ನೂತನ ಸದಸ್ಯರಾಗಿ ಪ್ರಮಾಣವಚನ

Prasthutha|

ನವದೆಹಲಿ: ಹೊಸದಾಗಿ ರಾಜ್ಯ ಸಭೆಗೆ ಆಯ್ಕೆಯಾಗಿರುವ ಕಾಂಗ್ರೆಸ್ಸಿನ ರಜನಿ ಅಶೋಕ್ ರಾವ್ ಪಾಟೀಲ್ ಸಹಿತ ಆರು ಜನ ಹೊಸ ಸದಸ್ಯರು ಇಂದು ರಾಜ್ಯ ಸಭೆಯ ಹೊಸ ಸದಸ್ಯರಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

- Advertisement -


ಸಭಾಪತಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಮೊದಲು ಹೊಸಬರನ್ನು ಪ್ರಮಾಣವಚನ ಸ್ವೀಕಾರಕ್ಕೆ ಕರೆದರು. ಮೊದಲು 63 ವರ್ಷ ಪ್ರಾಯದ ರಜನಿ ಎ. ಪಾಟೀಲ್ ಅವರು ಮರಾಠಿಯಲ್ಲಿ ಪ್ರಮಾಣವಚನ ಸ್ವೀಕರಿಸಿದರು.ಕನಿಮೊಳಿ, ಎನ್ ವಿ ಎನ್ ಸೋಮು, ಕೆ ಆರ್ ಎನ್ ರಾಜೇಶ್ ಕುಮಾರ್ ಮತ್ತು ಎಂ ಎಂ ಅಬ್ದುಲ್ಲಾ ಅವರು ತಮಿಳುನಾಡಿನಿಂದ ಡಿಎಂಕೆ ಪಕ್ಷದಿಂದ ಆಯ್ಕೆಯಾದ ರಾಜ್ಯಸಭಾ ಸದಸ್ಯರಿದ್ದು ಅವರೂ ಕ್ರಮವಾಗಿ ಪ್ರಮಾಣ ವಚನ ಸ್ವೀಕರಿಸಿದರು. ಕನಿಮೊಳಿ ದಿವಂಗತ ಮುಖ್ಯಮಂತ್ರಿ ಕೆ. ಕರುಣಾನಿಧಿಯವರ ಮಗಳು.


ಲೂಜಿನ್ಹೋ ಫೆಲಿರೋ ತೃಣಮೂಲ ಕಾಂಗ್ರೆಸ್ ನಿಂದ ಪಶ್ಚಿಮ ಬಂಗಾಳದಿಂದ ಮೇಲ್ಮನೆಗೆ ಆಯ್ಕೆಯಾದವರಿದ್ದು, ಅವರೂ ಪ್ರಮಾಣ ವಚನ ಸ್ವೀಕರಿಸಿದರು.
ರಾಜ್ಯ ಸಭೆಯ ಹೊಸ ಮಹಾ ಕಾರ್ಯದರ್ಶಿಯಾಗಿ ಪಿ. ಸಿ. ಮೋದಿ ಇಂದು ಅಧಿಕಾರ ವಹಿಸಿಕೊಂಡರು.

Join Whatsapp