ಮಂಗಳೂರು KSRTC ಬಸ್ ನಿಲ್ದಾಣದಲ್ಲಿ ಅನುಮಾನಾಸ್ಪದ ಬ್ಯಾಗ್ ಪತ್ತೆ: ಬಾಂಬ್ ಸ್ಕ್ಯಾಡ್’ನಿಂದ ಪರಿಶೀಲನೆ

Prasthutha|

ಮಂಗಳೂರು: ಲಾಲ್’ಬಾಗ್ ನ ಕೆಎಸ್’ಆರ್’ಟಿಸಿ ಬಸ್ ನಿಲ್ದಾಣದಲ್ಲಿ ಅನುಮಾನಾಸ್ಪದ ಬ್ಯಾಗ್ ಪತ್ತೆಯಾಗಿ ಆತಂಕ ಸೃಷ್ಟಿಯಾದ ಘಟನೆ ನಡೆದಿದೆ. ಆದರೆ ಸ್ವಲ್ಪ ಹೊತ್ತಿನ ಬಳಿಕ ಅದು ಬಸ್ ಪ್ರಯಾಣಿಕನೊಬ್ಬನಿಗೆ ಸೇರಿದ್ದು ಎಂದು ತಿಳಿದು ಬಂದಿದ್ದು, ಜನರು ನಿಟ್ಟುಸಿರು ಬಿಟ್ಟಿದ್ದಾರೆ.

- Advertisement -


ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಪರಿತ್ಯಕ್ತ ಬ್ಯಾಗ್ ಇದೆ ಎಂಬ ವಿಚಾರ ತಿಳಿಯುತ್ತಲೇ ಸ್ಥಳಕ್ಕಾಗಮಿಸಿದ ಬಾಂಬ್ ಸ್ಕ್ಯಾಡ್ ಬ್ಯಾಗ್ ಪರಿಶೀಲನೆ ನಡೆಸಿತ್ತು. ಅಲ್ಲದೆ ಕೆಲಕಾಲ ಆತಂಕದ ವಾತಾವಣ ಸೃಷ್ಟಿಯಾಗಿತ್ತು.


ಬಳಿಕ ಬ್ಯಾಗ್ ನ ವಾರಸುದಾರ ಪತ್ತೆಯಾಗಿದ್ದು, ಅದು ಬಸ್ ಪ್ರಯಾಣಿಕನೊಬ್ಬನಿಗೆ ಸೇರಿದ್ದು ಎಂದು ತಿಳಿದುಬಂದಿದೆ.

Join Whatsapp