ಮತದಾರ ಪಟ್ಟಿಯ ಅಕ್ರಮ ಪ್ರಕರಣ ಪ್ರಜಾಪ್ರಭುತ್ವದ ಅಣಕ: ಸಮಗ್ರ ತನಿಖೆಗೆ SDTU ಆಗ್ರಹ

Prasthutha|

ಬೆಂಗಳೂರು: ಮತದಾರರ ಪಟ್ಟಿಯ ಪರಿಷ್ಕರಣೆ ಹಗರಣದಲ್ಲಿ 6 ಲಕ್ಷಕ್ಕೂ ಅಧಿಕ ಮತದಾರರ ಹೆಸರು ಡಿಲೀಟ್ ಆಗಿದ್ದು ಸರಕಾರ ನಿಷ್ಪಕ್ಷವಾಗಿದ್ದರೆ ಇದನ್ನು ಗಂಭೀರವಾಗಿ ಪರಿಗಣಿಸಿ ಎಲ್ಲಾ ತಪ್ಪಿತಸ್ಥರನ್ನು ಸಮಾಜದ ಮುಂದೆ ಬಹಿರಂಗ ಪಡಿಸಿ ಕಾನೂನು ರೀತಿಯ ಕ್ರಮಕೈಗೊಳ್ಳಲಿ ಎಂದು ಸೋಶಿಯಲ್ ಡೆಮಾಕ್ರೆಟಿಕ್ ಟ್ರೇಡ್ ಯೂನಿಯನ್ ರಾಜ್ಯಾಧ್ಯಕ್ಷ ಫಝಲುಲ್ಲಾ ಒತಾಯಿಸಿದ್ದಾರೆ.

- Advertisement -

ಈ ಹಗರಣ ಪ್ರಜಾಪ್ರಭುತ್ವವನ್ನೇ ಬುಡಮೇಲುಗೊಳಿಸುವ ಅತ್ಯಂತ ಗಂಭೀರ ಪ್ರಕರಣವಾಗಿದ್ದು, ಹಗರಣದಲ್ಲಿ ಸರಕಾರದ ಪಾತ್ರದ ಬಗ್ಗೆ ಆರೋಪ ಕೇಳಿ ಬರುವಾಗ ಪ್ರಕರಣವನ್ನು ನ್ಯಾಯಾಂಗ ತನಿಖೆಗೊಳಪಡಿಸುವುದು ಸೂಕ್ತ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Join Whatsapp