ಸಿದ್ದೀಕ್ ಕಾಪ್ಪನ್ ರನ್ನು ಮಥುರಾದಿಂದ ದೆಹಲಿ ಆಸ್ಪತ್ರೆಗೆ ಸೇರಿಸಲು ಸುಪ್ರೀಮ್ ಕೋರ್ಟ್ ಆದೇಶ

Prasthutha|

ದೆಹಲಿ : ಮಥುರಾ ಜೈಲಿನಲ್ಲಿ ಬಂಧನದಲ್ಲಿರುವ ಕೇರಳ ಮೂಲದ ಪತ್ರಕರ್ತ ಸಿದ್ದೀಕ್ ಕಾಪ್ಪನ್ ರನ್ನು ವೈದ್ಯಕೀಯ ಚಿಕಿತ್ಸೆಗಾಗಿ ಉತ್ತರ ಪ್ರದೇಶದ ಮಥುರಾ ಆಸ್ಪತ್ರೆಯಿಂದ ದೆಹಲಿಯ ರಾಮ್ ಮನೋಹರ್ ಲೋಹಿಯಾ ಅಥವಾ ಏಮ್ಸ್ ಆಸ್ಪತ್ರೆಗೆ ಇಲ್ಲವೇ ಯಾವುದಾದರೂ ಸರಕಾರಿ ಆಸ್ಪತ್ರೆಗೆ ದಾಖಲಿಸಲು ಸುಪ್ರೀಮ್ ಕೋರ್ಟ್ ಆದೇಶ ನೀಡಿದೆ. ಈ ಕುರಿತು ‘ಲೈವ್ ಲಾ’ ವರದಿ ಮಾಡಿದೆ.   

- Advertisement -

ಸುಪ್ರೀಮ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ, ಜಸ್ಟಿಸ್ ಸೂರ್ಯಕಾಂತ್ ಮತ್ತು ಜಸ್ಟಿಸ್ ಎ ಎಸ್ ಬೋಪಣ್ಣ ಅವರಿದ್ದ ತ್ರಿಸದಸ್ಯ ಪೀಠ ಈ ಆದೇಶ ನೀಡಿದೆ. ಈ ಆದೇಶದಿಂದಾಗಿ ಸಿದ್ದೀಕ್ ಕಾಪ್ಪನ್ ರನ್ನು ಮಥುರಾ ಜೈಲಿನಲ್ಲಿ ತೀವ್ರವಾಗಿ ನರಳುವಂತೆ ಮಾಡಿದ್ದ ಉತ್ತರ ಪ್ರದೇಶದ ಆದಿತ್ಯನಾಥ್ ಸರಕಾರಕ್ಕೆ ತೀವ್ರ ಮುಖಭಂಗವಾಗಿದೆ.

ಕಾಪ್ಪನ್ ರನ್ನು ಚಿಕಿತ್ಸೆಗಾಗಿ ದೆಹಲಿಗೆ ವರ್ಗಾಯಿಸದಂತೆ ತಡೆಯುವ ಉತ್ತರ ಪ್ರದೇಶದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನಡೆಸಿದ ಎಲ್ಲಾ ಪ್ರಯತ್ನಗಳು ವಿಫಲಗೊಂಡವು. ಒಂದು ಹಂತದಲ್ಲಿ ತುಷಾರ್ ಮೆಹ್ತಾ, “ಈ ದೇಶದ ಸಾವಿರಾರು ತೆರಿಗೆ ಪಾವತಿದಾರರು ಕೂಡಾ ಮಥುರಾ ಆಸ್ಪತ್ರೆಯಲ್ಲಿ  ಚಿಕಿತ್ಸೆ  ಪಡೆಯುತ್ತಿದ್ದಾರೆ. ಹೀಗಿರುವಾಗ ಓರ್ವ ಆರೋಪಿಗೆ ವಿಶೇಷ ಆದ್ಯತೆ ಏಕೆ” ಎಂದು ಕೂಡಾ ಪ್ರಶ್ನಿಸಿದ್ದರು.

Join Whatsapp