ಆಮ್ಲಜನಕ ಬೇಕಾಗಿದೆ ಎಂದು ಟ್ವೀಟ್ ಮಾಡಿದ ಯುವಕನ ವಿರುದ್ಧ FIR ದಾಖಲಿಸಿದ ಉತ್ತರಪ್ರದೇಶ ಸರಕಾರ!

Prasthutha|

ಉತ್ತರ ಪ್ರದೇಶದ ಅಮೇಠಿಯಲ್ಲಿ ತಮ್ಮ ಅಜ್ಜನಿಗೆ ಆಕ್ಸಿಜನ್ ಸಿಲಿಂಡರ್ ಗಾಗಿ ಟ್ವಿಟ್ಟರ್ ನಲ್ಲಿ ಮನವಿ ಮಾಡಿದ ವ್ಯಕ್ತಿಯ ವಿರುದ್ಧ ಪೊಲೀಸರು ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ ಎಂದು ದಿ ವೈರ್ ವರದಿ ಮಾಡಿದೆ.

- Advertisement -

ಶಶಾಂಕ್ ಯಾದವ್ ತನ್ನ ಅಜ್ಜನಿಗೆ ಕೊರೊನಾ ವೈರಸ್ ಇದೆಯೇ ಎಂದು ಉಲ್ಲೇಖಿಸಿರಲಿಲ್ಲ. ಆದಾಗ್ಯೂ, ಭಯ ಅಥವಾ ಎಚ್ಚರಿಕೆಯನ್ನು ಉಂಟುಮಾಡುವ ಉದ್ದೇಶದಿಂದ ವದಂತಿಯನ್ನು ಪ್ರಸಾರ ಮಾಡಿದ ಆರೋಪದ ಮೇಲೆ ಪೊಲೀಸರು ಅವರ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ.

ದಿ ಇಂಡಿಯನ್ ಎಕ್ಸ್ ಪ್ರೆಸ್ ಪ್ರಕಾರ, ಆ ವ್ಯಕ್ತಿ “ದಾರಿ ತಪ್ಪಿಸುವ ಮಾಹಿತಿಯನ್ನು ಹರಡುತ್ತಿದ್ದಾನೆ” ಎಂದು ಪೊಲೀಸರು ಹೇಳಿದ್ದಾರೆ. ಉತ್ತರ ಪ್ರದೇಶ ಸರ್ಕಾರವನ್ನು ಗುರಿಯಾಗಿಸಲು ಯಾದವ್ ಆಮ್ಲಜನಕ ಪೂರೈಕೆ ಮತ್ತು ಕೊರೊನಾ ವೈರಸ್ ಬಗ್ಗೆ ಸುಳ್ಳು ಮಾಹಿತಿ ನೀಡಿದರು ಎಂದು ರಾಮ್ ಗಂಜ್ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ವಿರೇಂದ್ರ ಸಿಂಗ್ ಹೇಳಿದ್ದಾರೆ. “ಆರೋಪಿಯ ಟ್ವೀಟ್ ನಿಂದಾಗಿ ಹಲವಾರು ವ್ಯಕ್ತಿಗಳು ಸರ್ಕಾರದ ವಿರುದ್ಧ ಆರೋಪಗಳನ್ನು ಮಾಡಿದ್ದಾರೆ ಎಂದು ವಿಚಾರಣೆಯ ಸಮಯದಲ್ಲಿ ಕಂಡುಬಂದಿದೆ” ಎಂದು ಸಿಂಗ್ ಪತ್ರಿಕೆಗೆ ತಿಳಿಸಿದ್ದಾರೆ.

Join Whatsapp