ಎರಡು ವಾರದಲ್ಲಿ ಅಧಿಸೂಚನೆ ಪ್ರಕಟಿಸಿ BBMPಗೆ ಚುನಾವಣೆ ನಡೆಸುವಂತೆ ಸುಪ್ರೀಂ ಕೋರ್ಟ್ ಆದೇಶ

Prasthutha|

- Advertisement -

ನವದೆಹಲಿ: ದೇಶಾದ್ಯಂತ ಕಾರ್ಪೊರೇಷನ್ ಎಲೆಕ್ಷನ್ ನಡೆಸುವಂತೆ ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠ ಮಹತ್ವದ ಆದೇಶ ಹೊರಡಿಸಿದೆ.

ಮಧ್ಯಪ್ರದೇಶ ಸ್ಥಳೀಯ ಸಂಸ್ಥೆ ಹಾಗೂ ಕರ್ನಾಟಕದ ಬಿಬಿಎಂಪಿ ಚುನಾವಣೆಗಳಲ್ಲಿ ಒಬಿಸಿ ಮೀಸಲಾತಿ ಮತ್ತು ಡಿ ಲಿಮಿಟೇಷನ್ ಮಾಡದ ಹಿನ್ನೆಲೆಯಲ್ಲಿ ಎಸ್ಸಿ ಎಸ್ಟಿ , ಜನರಲ್ ಕೆಟಗರಿಯಲ್ಲೇ ಚುನಾವಣೆಯನ್ನು ನಡೆಸುವಂತೆ ಕೋರ್ಟ್ ಆದೇಶಿಸಿದೆ.

- Advertisement -

ಎರಡು ವಾರಗಳಲ್ಲಿ ನೋಟಿಫಿಕೇಷನ್ ಹೊರಡಿಸುವಂತೆ ಕೋರ್ಟ್ ಸೂಚನೆಯನ್ನು ಕೊಟ್ಟಿದೆ. ಇದರಿಂದಾಗಿ ಬಿಬಿಎಪಿಯಲ್ಲಿನ 198 ವಾರ್ಡ್ ಗಳಿಗೆ ಚುನಾವಣೆ ನಡೆಯುವುದು ಬಹುತೇಕ ಖಚಿತವಾಗಿದೆ. ಇನ್ನು ಚುನಾವಣೆಯನ್ನು ನಡೆಸುವಂತೆ ಕೋರಿ ಸುಪ್ರಿಂ ಅಂಗಳಕ್ಕೆ ಅರ್ಜಿದಾರರು ಹೋಗಿದ್ದರು. ಆದರೆ, ಸರ್ಕಾರ 243 ವಾರ್ಡ್ ಗಳನ್ನು ರಚಿಸಿ ಚುನಾವಣೆಯನ್ನು ನಡೆಸಲು ತೀರ್ಮಾಸಿತ್ತು. ಆದರೆ ಈವರೆಗೂ ಡಿ ಲಿಮಿಟೇಷನ್ ಮಾಡಿ ಸರ್ಕಾರ ಆದೇಶವನ್ನು ಹೊರಡಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ198 ವಾರ್ಡ್ ಗಳಿಗೆ ಶೀಘ್ರದಲ್ಲಿ ಬಿಬಿಎಂಪಿ ಚುನಾವಣೆಯನ್ನು ನಡೆಸಬೇಕಿದೆ.



Join Whatsapp