ಜ್ಞಾನವಾಪಿ ಮಸೀದಿಯಲ್ಲಿ ‘ಶಿವಲಿಂಗ’ ಪೂಜಿಸಲು ಅವಕಾಶ ಕೋರಿ ಸಲ್ಲಿಸಿದ ಅರ್ಜಿ ಸ್ವೀಕರಿಸಲು ಸುಪ್ರೀಂಕೋರ್ಟ್ ನಕಾರ

Prasthutha|

ಲಖನೌ: ಜ್ಞಾನವಾಪಿ ಮಸೀದಿ ಸಂಕೀರ್ಣದೊಳಗೆ ಅಲಹಾಬಾದ್ ಹೈಕೋರ್ಟ್ ನೇಮಿಸಿದ ಕಮಿಷನರ್ ನಡೆಸಿದ ಸಮೀಕ್ಷೆಯ ವೇಳೆ ಪತ್ತೆಯಾದ ಶಿವಲಿಂಗ ಎನ್ನಲಾಗುತ್ತಿರುವುದನ್ನು ಪೂಜಿಸಲು ಅವಕಾಶ ನೀಡುವಂತೆ ಕೋರಿ ಸಲ್ಲಿಸಲಾದ ಪ್ರತ್ಯೇಕ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ.

- Advertisement -

ವಾರಣಾಸಿಯ ಜ್ಞಾನವಾಪಿ ಮಸೀದಿಗೆ ಸಂಬಂಧಿಸಿದ ಕೇಸನ್ನು ನಿರ್ವಹಿಸುವ ಕುರಿತು ಜಿಲ್ಲಾ ನ್ಯಾಯಾಲಯದ ನಿರ್ಧಾರಕ್ಕಾಗಿ ಕಾಯಲು ಸುಪ್ರೀಮ್ ಕೋರ್ಟ್ ಪ್ರಾಮುಖ್ಯತೆ ನೀಡಿದೆ. ಮಸೀದಿ ಆವರಣದ ಸಮೀಕ್ಷೆ ನಡೆಸಲು ನ್ಯಾಯಾಲಯ ನೇಮಿಸಿದ ಕಮಿಷನರ್ ಬಗ್ಗೆ ಮುಸ್ಲಿಮರು ಮಾಡಿದ ಆಕ್ಷೇಪಣೆಗಳನ್ನು ಮುಂದಿನ ದಿನಗಳಲ್ಲಿ ಪರಿಗಣಿಸಲು ಮುಕ್ತ ಅವಕಾಶ ನೀಡಲಾಗುವುದೆಂದು ಸುಪ್ರೀಂಕೋರ್ಟ್ ತಿಳಿಸಿದೆ.

ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್ ಅವರನ್ನೊಳಗೊಂಡ ಪೀಠ, ವಾರಣಾಸಿಯ ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಅಕ್ಟೋಬರ್’ಗೆ ಮುಂದೂಡಿದೆ. ಈ ಮಧ್ಯೆ ಕಮಿಷನರ್ ನೇಮಕದ ನಿರ್ಧಾರವನ್ನು ಎತ್ತಿಹಿಡಿದಿದ್ದ ಅಲಹಾಬಾದ್ ಹೈಕೋರ್ಟ್’ನ ಆದೇಶವನ್ನು ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿಯು ಸುಪ್ರೀಂಕೋರ್ಟ್’ನಲ್ಲಿ ಪ್ರಶ್ನಿಸಿತ್ತು.



Join Whatsapp