ಮಸೀದಿಗಳ ರಿಪೇರಿಗಳಿಗೆ ನೀಡುತ್ತಿರುವ ಸಬ್ಸಿಡಿ 10 ಕೋಟಿ ರೂ.ಗೆ ಹೆಚ್ಚಳ: ಎಂ.ಕೆ.ಸ್ಟಾಲಿನ್

Prasthutha|

ಚೆನ್ನೈ: ಪ್ರಮುಖ ರಿಪೇರಿ ಅನುದಾನ (ಎಂಆರ್’ಜಿ)ದಡಿಯಲ್ಲಿ ಮಸೀದಿಗಳ ರಿಪೇರಿಗಳಿಗೆ ನೀಡುತ್ತಿರುವ ಸಬ್ಸಿಡಿಯನ್ನು 10 ಕೋಟಿ ರೂ.ಗೆ ಹೆಚ್ಚಿಸುವುದಾಗಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್  ಘೋಷಿಸಿದ್ದಾರೆ.

- Advertisement -

ಕಳೆದ ವರ್ಷ ಡಿಎಂಕೆ ಸರ್ಕಾರವು ಈ ಉದ್ದೇಶಕ್ಕಾಗಿ 6 ಕೋಟಿ ರೂ.ಗಳ ಸಬ್ಸಿಡಿಯನ್ನು ನೀಡಿತ್ತು. ಹಿಂದಿನ ಎಐಎಡಿಎಂಕೆ ಆಡಳಿತವು ಎಂಜಿಆರ್’ಗೆ 5 ಕೋಟಿ ರೂ.ಗಳನ್ನು ನೀಡಿತ್ತು.

ತಮಿಳುನಾಡಿನಲ್ಲಿ ಕೋಮುವಾದಿ, ಜನಾಂಗೀಯ ಮತ್ತು ಉಗ್ರಗಾಮಿ ಶಕ್ತಿಗಳು ಬೆಳೆಯಲು ತಮ್ಮ ಸರ್ಕಾರ ಎಂದಿಗೂ ಅವಕಾಶ ನೀಡುವುದಿಲ್ಲ ಮತ್ತು ರಾಜ್ಯವು ಹಿಂಸಾಚಾರ ಮುಕ್ತವಾಗಿ ಉಳಿಯುತ್ತದೆ ಎಂದು ಎಂಆರ್’ಜಿ ಬಗ್ಗೆ ಘೋಷಣೆ ಮಾಡುವಾಗ, ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಹೇಳಿದರು.

- Advertisement -

ಪ್ರಸ್ತುತ ಸರ್ಕಾರವು ವಿಚಾರವಾದಿ ಮತ್ತು ಧರ್ಮ ವಿರೋಧಿಯಾಗಿದೆ ಮತ್ತು ದೇವಾಲಯಗಳನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ ಎಂಬ ವದಂತಿಗಳನ್ನು ‘ಒಂದು ಗುಂಪು’ ಹರಡುತ್ತಿದೆ ಎಂದು ಹೇಳಿದ ಸ್ಟಾಲಿನ್, ತಮ್ಮ ಸರ್ಕಾರ ಕೋಮುವಾದದ ವಿರುದ್ಧವಾಗಿದೆಯೇ ಹೊರತು ಧರ್ಮದ ವಿರುದ್ಧವಲ್ಲ ಎಂದು ಸ್ಪಷ್ಪಪಡಿಸಿದರು.

ತಮಿಳುನಾಡು ಮುಖ್ಯಮಂತ್ರಿ ಹಾಗೂ ನಮ್ಮ ಸರ್ಕಾರವು ವಿಶ್ವಾಸಿಗಳ ವಿರುದ್ಧವಲ್ಲ, ಆದರೆ ಜನರ ಧಾರ್ಮಿಕ ನಂಬಿಕೆಯನ್ನು ತಮ್ಮ ವೈಯಕ್ತಿಕ ಲಾಭಕ್ಕಾಗಿ ಬಳಸುವವರ ವಿರುದ್ಧವಾಗಿದೆ ಎಂದು ಪುನರುಚ್ಚರಿಸಿದರು.

ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ 2022 ರ ಅಕ್ಟೋಬರ್ 31 ರವರೆಗೆ ದೇವಾಲಯಗಳು ಮತ್ತು ದತ್ತಿ ಸಂಸ್ಥೆಗಳಿಗೆ ಸೇರಿದ 3,657.48 ಕೋಟಿ ರೂ.ಗಳ ಮೌಲ್ಯದ 3,150 ಎಕರೆ ಅತಿಕ್ರಮಣ ಭೂಮಿಯನ್ನು ವಶಪಡಿಸಿಕೊಂಡಿದೆ ಎಂದು ಅವರು ಹೇಳಿದರು.



Join Whatsapp