ನೇಪಾಳದಲ್ಲಿ ವಿಮಾನ ಪತನ: 8 ಮೃತದೇಹ ಪತ್ತೆ

Prasthutha|

- Advertisement -

ಕಠ್ಮಂಡು: ನೇಪಾಳದ ಪೋಖರಾದಲ್ಲಿ ವಿಮಾನವೊಂದು ಭಾನುವಾರ ಪತನಗೊಂಡಿದ್ದು, ಈವರೆಗೆ 8 ಮೃತದೇಹಗಳು ಪತ್ತೆಯಾಗಿವೆ.

ವಿಮಾನದಲ್ಲಿ ಒಟ್ಟು 10 ವಿದೇಶಿ ಪ್ರಯಾಣಿಕರು ಸೇರಿದಂತೆ 68 ಮಂದಿ ಮತ್ತು ನಾಲ್ವರು ಸಿಬ್ಬಂದಿ ಇದ್ದರು ಎಂದು ತಿಳಿದು ಬಂದಿದೆ.

- Advertisement -

ಯೇತಿ ಏರ್‌ ಲೈನ್ಸ್‌ 9N-ANC ATR-72 ವಿಮಾನವು ಕಠ್ಮಂಡು ವಿಮಾನ ನಿಲ್ದಾಣದಿಂದ ಬೆಳಿಗ್ಗೆ 10.33ಕ್ಕೆ ಹೊರಟಿತ್ತು. ಪೋಖರಾದಲ್ಲಿ ಲ್ಯಾಂಡಿಂಗ್‌ ವೇಳೆ ಹಳೆಯ ವಿಮಾನ ನಿಲ್ದಾಣ ಮತ್ತು ಪೋಖರಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಡುವಿನ ಸೇತಿ ನದಿ ದಂಡೆ ಮೇಲೆ ವಿಮಾನ ಪತನಗೊಂಡಿದೆ.

Join Whatsapp