ಪರೀಕ್ಷೆ ಮಧ್ಯೆ ಹಿಜಾಬ್ ಕಳಚುವಂತೆ ಒತ್ತಾಯ: ವಿದ್ಯಾರ್ಥಿಗಳ ಪ್ರತಿಭಟನೆ

Prasthutha|

ಬಿಹಾರ: ಪರೀಕ್ಷೆಯ ಮಧ್ಯದಲ್ಲಿ ಇಬ್ಬರು ವಿದ್ಯಾರ್ಥಿನಿಯರಿಗೆ ಹಿಜಾಬ್ ಅನ್ನು ತೆಗೆದುಹಾಕುವಂತೆ ಪರೀಕ್ಷಕರು ಒತ್ತಾಯಿಸಿದ್ದು, ಇದರ ವಿರುದ್ಧ ಮುಜಫ್ಫರ್ಪುರ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.
ಮುಜಾಫರ್ಪುರದ ಎಂಡಿಡಿಎಂ ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು, ಪರೀಕ್ಷೆ ನಡೆಯುತ್ತಿರುವುದರ ಮಧ್ಯೆ ಪರೀಕ್ಷಕರು ತಮ್ಮ ಹಿಜಾಬ್ ಅನ್ನು ಕಳಚುವಂತೆ ಒತ್ತಾಯಿಸಿದ್ದು, ಅದನ್ನು ನಿರಾಕರಿಸಿದಾಗ, ವಿದ್ಯಾರ್ಥಿಗಳನ್ನು ಪರೀಕ್ಷಾ ಕೊಠಡಿಯಿಂದ ಹೊರಕಳುಹಿಸಲಾಯಿತು ಎಂದು ತಿಳಿದು ಬಂದಿದೆ.

- Advertisement -

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕಾಲೇಜು ಪ್ರಾಂಶುಪಾಲರು, ನಮಗೆ ಹಿಜಾಬ್ ಕಳಚಿಸುವ ಉದ್ದೇಶ ಇರಲಿಲ್ಲ. ಆದರೆ ಆ ಹುಡುಗಿ ಬ್ಲೂಟೂತ್ ನಂತಹ ಸಾಧನವನ್ನು ಬಳಸುತ್ತಿದ್ದಾಳೆಯೇ ಎಂದು ಪರೀಕ್ಷಿಸಲು ನಾವು ಮುಂದಾಗಿದ್ದೇವೆ ಅಷ್ಟೇ ಎಂದು ಹೇಳಿದ್ದಾರೆ. ಆದರೆ ವಿದ್ಯಾರ್ಥಿಗಳು ವಿದ್ಯಾರ್ಥಿಗಳು ಪರೀಕ್ಷಾ ಕೊಠಡಿ ಪ್ರವೇಶಿಸುವ ಮುನ್ನವೇ ಎಲ್ಲಾ ರೀತಿಯ ಪರಿಶೀಲನೆ ನಡೆಸಬೇಕು, ಈ ರೀತಿ ಪರೀಕ್ಷೆಯ ಮಧ್ಯೆ ಹಿಜಾಬ್ ಕಳಚುವಂತೆ ಹೇಳಿ ಬಹಿರಂಗವಾಗಿ ಅವಮಾನಿಸುವುದು ಸರಿಯಲ್ಲ ಎಂದು ಪ್ರತಿಭಟಿಸಿದರು.

Join Whatsapp