ವಿದೇಶಿ ಶಿಕ್ಷಣಕ್ಕೆ ತೆರಳುವ ವಿದ್ಯಾರ್ಥಿಗಳಿಗೆ ಆದ್ಯತೆಯಲ್ಲಿ ಲಸಿಕೆ ನೀಡಲು ತೆಲಂಗಾಣ ಸರಕಾರ ನಿರ್ಧಾರ

Prasthutha|

ಹೈದರಾಬಾದ್‌ : ಉನ್ನತ ಶಿಕ್ಷಣದ ಉದ್ದೇಶದಿಂದ ವಿದೇಶಕ್ಕೆ ಪ್ರಯಾಣಿಸುವ ವಿದ್ಯಾರ್ಥಿಗಳಿಗೆ ಅವರು ಸುರಕ್ಷಿತವಾಗಿ ಪ್ರಯಾಣಿಸುವಂತಾಗಲು, ಆದ್ಯತೆಯಲ್ಲಿ ಲಸಿಕೆ ನೀಡಲಾಗುವುದು ಎಂದು ತೆಲಂಗಾಣ ಸರಕಾರ ಘೋಷಿಸಿದೆ.

ಕ್ಯಾಬಿನೆಟ್‌ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಕುರಿತ ಮಾರ್ಗಸೂಚಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ಟಿಆರ್‌ ಎಸ್‌ ಕಾರ್ಯಾಧ್ಯಕ್ಷ, ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಕೆ. ತಾರಕ ರಾಮ ರಾವ್‌ ಹೇಳಿದ್ದಾರೆ.

- Advertisement -

ಕೋವಿಡ್‌ ನಿಂದಾಗಿ ಶಿಕ್ಷಣಕ್ಕಾಗಿ ವಿದೇಶಕ್ಕೆ ತೆರಳುವ ಹಲವಾರು ವಿದ್ಯಾರ್ಥಿಗಳಿಗೆ ಸಂಕಷ್ಟ ಎದುರಾಗಿದೆ. ಉತ್ತಮ ಅಂಕಗಳನ್ನು ಪಡೆದು ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಸೀಟು ಸಿಕ್ಕಿರುವ ವಿದ್ಯಾರ್ಥಿಗಳಿಗೆ ಮುಂದಿನ ಸೆಮಿಸ್ಟರ್‌ ಕ್ಲಾಸ್‌ ಗಳು ಆಗಸ್ಟ್‌ ನಲ್ಲಿ ಆರಂಭಗೊಳ್ಳಲಿವೆ. ಕೋವಿಡ್‌ ನಿಯಮಗಳು ಇರುವ ದೇಶಗಳಿಗೆ ಅವರು ಪ್ರಯಾಣಿಸುವುದು ಇನ್ನೂ ಅನಿಶ್ಚಿತವಾಗಿದೆ.

ಹಲವಾರು ವಿದೇಶಿ ವಿಶ್ವವಿದ್ಯಾಲಯಗಳು ತಮ್ಮ ಕ್ಯಾಂಪಸ್‌ ಪ್ರವೇಶಿಸುವುದಕ್ಕೂ ಮುನ್ನಾ ಲಸಿಕೆ ಪಡೆದಿರಬೇಕು ಎಂದು ವಿದ್ಯಾರ್ಥಿಗಳಿಗೆ ಕಡ್ಡಾಯಗೊಳಿಸಿವೆ.  

- Advertisement -