ಉತ್ತರ ಪ್ರದೇಶದಲ್ಲಿ ಕಸದ ವಾಹನದಲ್ಲಿ ಕೋವಿಡ್ ಮೃತದೇಹ ಸ್ಮಶಾನಕ್ಕೆ ರವಾನೆ : ಮೃತದೇಹಗಳಿಗೆ ಸಿಗದ ಕನಿಷ್ಟ ಗೌರವ

Prasthutha|

ಕೊರೋನಾ ಸಾವುಗಳ ಸಂಖ್ಯೆಯಲ್ಲಿ ಉತ್ತರ ಪ್ರದೇಶ ಸರಕಾರ ತಪ್ಪು ಮಾಹಿತಿ ನೀಡುತ್ತಿದೆ ಎಂಬುದು ದೇಶದಾದ್ಯಂತ ಸಾಕಷ್ಟು ಚರ್ಚೆಗೆ ಈಡು ಮಾಡಿದೆ. ಈ ನಡುವೆ ಮೃತದೇಹಗಳಿಗೆ ಕನಿಷ್ಟ ಗೌರವ ಕೂಡ ದೊರಕುವುದಿಲ್ಲ ಎಂಬುದು ಇತ್ತೀಚ್ಚೆಗೆ ವೈರಲ್ ಆಗುತ್ತಿರುವ ಹಲವು ವೀಡಿಯೋ ದೃಶ್ಯಗಳು ಸ್ಪಷ್ಟಪಡಿಸುತ್ತಿದೆ.

- Advertisement -

ಎರಡು ದಿನಗಳ ಹಿಂದಷ್ಟೇ ಕೋವಿಡ್‌ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ದೇಹವನ್ನು ಇಬ್ಬರು ಯುವಕರು ನದಿಗೆ ಎಸೆಯುತ್ತಿರುವ ವಿಡಿಯೋ ಒಂದು ಮೇ 30 ರ ಮಧ್ಯಾಹ್ನದ ಹೊತ್ತಿಗೆ ಇಂಟರ್‌ನೆಟ್‌ ನಲ್ಲಿ ಹರಿದಾಡಲು ಆರಂಭವಾಗಿತ್ತು. ಈಗ ಮೃತದೇಹವನ್ನು ಕನಿಷ್ಠ ಗೌರವ ನೀಡದೇ ಕಸದ ವಾಹನಕ್ಕೆ ಎಸೆಯುತ್ತಿರುವ ವಿಡಿಯೊ ವೈರಲ್ ಆಗಿದೆ.
ಇಬ್ಬರು ಸ್ಥಳೀಯ ಪೊಲೀಸ್ ಘಟಕದ ಸದಸ್ಯರು, 50 ವರ್ಷದ ವ್ಯಕ್ತಿಯ ಮೃತದೇಹದ ಅಂತ್ಯಸಂಸ್ಕಾರಕ್ಕಾಗಿ ಸ್ಮಶಾನಕ್ಕೆ ಸಾಗಿಸುವ ಸಂದರ್ಭದಲ್ಲಿ, ಶವವನ್ನು ಕಸದ ಟ್ರಕ್‌ಗೆ ಎಸೆಯುತ್ತಿರುವ ದೃಶ್ಯಗಳಿವೆ.

ಲಕ್ನೋದಿಂದ 250 ಕಿ.ಮೀ ದೂರದಲ್ಲಿರುವ ಮಹೋಬಾದ ಜಿಲ್ಲಾ ಆಸ್ಪತ್ರೆಯಲ್ಲಿ ಶನಿವಾರ ಈ ಘಟನೆ ನಡೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಘಟನೆ ಕುರಿತು ಆಕ್ರೋಶ ವ್ಯಕ್ತವಾದ ನಂತರ, ತನಿಖೆಗೆ ಆದೇಶಿಸಲಾಗಿದೆ.ಮಹೋಬಾದ ಹಿರಿಯ ಪೊಲೀಸ್ ಅಧಿಕಾರಿ ಆರ್.ಕೆ.ಗೌತಮ್ ತನಿಖೆಗೆ ಆದೇಶಿಸಿದ್ದು, 24 ಗಂಟೆಗಳ ಒಳಗೆ ಪ್ರಕರಣದ ತನಿಖೆ ನಡೆಸುವಂತೆ ಸಂಬಂಧಪಟ್ಟ ಅಧಿಕಾರಿಗೆ ಸೂಚನೆ ನೀಡಿದ್ದಾರೆ.

Join Whatsapp