ಹಿಂದೂ ರಾಷ್ಟ್ರಕ್ಕಾಗಿ ‘ಕೊಲೆ’ ಮಾಡುವಂತೆ ವಿದ್ಯಾರ್ಥಿಗಳಿಗೆ ಪ್ರತಿಜ್ಞೆ ಮಾಡಿಸಿದ ದುಷ್ಕರ್ಮಿಗಳು!

Prasthutha|

ಇತ್ತೀಚ್ಚೆಗೆ ಹರಿದ್ವಾರ ಮತ್ತು ಛತ್ತೀಸ್‌ಗಢದ ಧರ್ಮ ಸಂಸದ್‌ನಲ್ಲಿ ಮಾಡಿದ ದ್ವೇಷ ಭಾಷಣಗಳ ವಿರುದ್ದ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿರುವಾಗಲೇ, ಅಪ್ರಾಪ್ತ ಮಕ್ಕಳೊಂದಿಗೆ ಹಿಂದೂ ರಾಷ್ಟ್ರಕ್ಕಾಗಿ ಸಾಯುವ ಮತ್ತು ಕೊಲ್ಲುವ ಪ್ರತಿಜ್ಞೆ ಮಾಡಿಸುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಬಿಜೆಪಿ ಪರ ಪ್ರೊಪಗಾಂಡ ಸೃಷ್ಟಿಸುವ, ಕೋಮುವಾಗಿ ಟಿವಿ ಚಾನೆಲ್‌ ಸುದರ್ಶನ್‌ ಟಿವಿ ಇದನ್ನು ಪ್ರಸಾರ ಮಾಡಿದ್ದು, ಅದರ ಸಂಪಾದಕ ಸುರೇಶ್ ಚವ್ಹಾಂಕೆ ಇದನ್ನು ಹಂಚಿಕೊಂಡಿದ್ದಾರೆ.

- Advertisement -

ವಿಡಿಯೊದಲ್ಲಿ ಸಮವಸ್ತ್ರ ಧರಿಸಿರುವ ಅಪ್ರಾಪ್ತ ಮಕ್ಕಳಿಗೆ ಹಿಂದೂ ರಾಷ್ಟ್ರಕ್ಕಾಗಿ ಜನರನ್ನು ಕೊಲ್ಲುವಂತೆ ಪ್ರತಿಜ್ಞೆ ಮಾಡಿಸಲಾಗಿದೆ. ಕೆಂಪು ಸಮವಸ್ತ್ರದಲ್ಲಿ, ಸಾಲಾಗಿ ನಿಂತಿರುವ ವಿದ್ಯಾರ್ಥಿಗಳಿಗೆ ವ್ಯಕ್ತಿಯೊಬ್ಬ ಹಿಂದೂ ರಾಷ್ಟ್ರಕ್ಕಾಗಿ ಹೋರಾಡುವಂತೆ, ಸಾಯುವಂತೆ ಹಾಗೂ ಅಗತ್ಯವಿದ್ದರೆ ಕೊಲ್ಲುವಂತೆ ಪ್ರತಿಜ್ಞೆ ಮಾಡಿಸುತ್ತಾನೆ. ಈ ವೇಳೆ ಅವನ ಮಾತನ್ನು ಪುನರಾವರ್ತಿಸುತ್ತಾರೆ.

ಸುದರ್ಶನ್ ಟಿವಿ ಮತ್ತು ಅದರ ಸಂಪಾದಕ ಉತ್ತರ ಪ್ರದೇಶದ ಸೋನಾಭದ್ರದಲ್ಲಿ ಅಪ್ರಾಪ್ತ ಮಕ್ಕಳು ಕೊಲ್ಲುವ ಪ್ರತಿಜ್ಞೆಯನ್ನು ಮಾಡಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.

Join Whatsapp