ಮಂಗಳೂರು: ಬೈಕ್ ಅಪಘಾತದಿಂದ ಯುವಕನ ಮೆದುಳು ನಿಷ್ಕ್ರಿಯ| ಅಂಗಾಂಗ ದಾನ ಮಾಡಿದ ಕುಟುಂಬ

Prasthutha|

ಮಂಗಳೂರು: ಅಪಘಾತ ಸಂಭವಿಸಿ ಮೆದುಳು ನಿಷ್ಕ್ರಿಯಗೊಂಡ ಯುವಕನ ಅಂಗಾಂಗಗಳನ್ನು ಕುಟುಂಬಸ್ಥರು ದಾನ ಮಾಡಿದ್ದಾರೆ.

- Advertisement -


ಪುಂಜಾಲಕಟ್ಟೆಯಲ್ಲಿ ಭಾನುವಾರ ನಡೆದಿದ್ದ ಬೈಕ್ ಅಪಘಾತದಿಂದ ಗಂಭೀರ ಗಾಯಗೊಂಡು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಾಗಿ ಕೋಮಾ ಸ್ಥಿತಿಯಲ್ಲಿದ್ದ ಪುಂಜಾಲಕಟ್ಟೆ ಮೂರ್ಜೆ ನಿವಾಸಿಯಾದ ಸತೀಶ್ ಎಂಬ ಯುವಕನ ಮೆದುಳು ನಿಷ್ಕ್ರಿಯಗೊಂಡಿತ್ತು.


ನಿನ್ನೆ ಆಸ್ಪತ್ರೆಯ ವೈದ್ಯರು ಯುವಕನ ಮೆದುಳು ನಿಷ್ಕ್ರಿಯಗೊಂಡ ಬಗ್ಗೆ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಸತೀಶ್ ಅವರ ಹೃದಯ, ಲಿವರ್,ಕಿಡ್ನಿ ದಾನಕ್ಕೆ ನಿರ್ಧರಿಸಿದ್ದಾರೆ.

- Advertisement -

ಹೃದಯವನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ, ಲಿವರ್ ಬೆಂಗಳೂರಿನ ನಾರಾಯಣ್ ಹೃದಯಾಲಯಕ್ಕೆ ವಿಮಾನದ ಮೂಲಕ ರವಾನೆ ಮಾಡಲಾಯಿತು.

ಒಂದು ಕಿಡ್ನಿ ಉಡುಪಿ ಮಣಿಪಾಲ್ ಆಸ್ಪತ್ರೆಗೆ, ಮತ್ತೊಂದು ಕಿಡ್ನಿ ಮಂಗಳೂರಿನ ಕೆಎಸ್ ಹೆಗ್ಡೆ ಆಸ್ಪತ್ರೆಗೆ ರವಾನೆ ಮಾಡಲಾಯಿತು.

ಮಂಗಳೂರು ಪೊಲೀಸರು ಝೀರೊ ಟ್ರಾಫಿಕ್ ವ್ಯವಸ್ಥೆ ಮೂಲಕ ಆ್ಯಂಬುಲೆನ್ಸ್ ನಲ್ಲಿ ಅಂಗಾಂಗ ಸಾಗಿಸಲು ವ್ಯವಸ್ಥೆ ಮಾಡಿದರು.



Join Whatsapp