ಇನ್ನೊಬ್ಬರ ಅನ್ನ ಕಸಿಯುವುದು ಧರ್ಮವಲ್ಲ: ಸಂಘಪರಿವಾರದ ವಿರುದ್ಧ ಎಚ್ ಡಿಕೆ ಕಿಡಿ

Prasthutha|

ಬೆಂಗಳೂರು: ರಾಜ್ಯದಲ್ಲಿ ವಿಶ್ವ ಹಿಂದು ಪರಿಷತ್, ಬಜರಂಗದಳದಂತಹ ಸಂಘಟನೆಗಳು ಧರ್ಮೋದ್ದಾರದ ಹೆಸರು ಹೇಳಿಕೊಂಡು ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಕಾರಣವಾಗುತ್ತಿವೆ. ಇನ್ನೊಬ್ಬರ ಅನ್ನ ಕಸಿಯುವುದು, ನೆಮ್ಮದಿಯ ನಾಡಿಗೆ ಕಿಚ್ಚು ಹಚ್ಚುವುದು ಧರ್ಮವಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

- Advertisement -

ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, ಪಕ್ಷವೊಂದರ ಬಾಲಂಗೋಚಿಗಳಾಗಿರುವ ಆ ಸಂಘಟನೆಗಳು ಹಿಂದೂ ಸಮಾಜದ ಪ್ರಾತಿನಿಧಿಕ ಸಂಸ್ಥೆಗಳಲ್ಲ. ಜಾತಿ-ಧರ್ಮದ ಆಧಾರದಲ್ಲಿ ಜನರ ನಡುವೆ ಕಂದಕ ಸೃಷ್ಟಿಮಾಡುವ ಕೆಲಸವನ್ನು ಆ ಸಂಘಟನೆಗಳು ನಿರಂತರವಾಗಿ ಮಾಡುತ್ತಿವೆ ಎಂದು ಹರಿಹಾಯ್ದರು. ಈ ಕುರಿತು ಅವರು ತಮ್ಮ ಟ್ವೀಟರ್‍ ಖಾತೆಯಲ್ಲಿಯೂ ಟೀಕೆ ವ್ಯಕ್ತಪಡಿಸಿದ್ದಾರೆ.

ಕೊರೊನ ಕಾಲದಲ್ಲಿ ಬಹುತೇಕ ಸಂಘಟನೆಗಳು, ಜನಸಾಮಾನ್ಯರು ಜಾತಿ ಬೇಧ ಮೀರಿ ಜನಸೇವೆ ಮಾಡಿದ್ದಾರೆ. ಆದರೆ ಶವಸಂಸ್ಕಾರದಲ್ಲಿಯೂ ಕೀರ್ತಿ ಹುಡುಕುವ ಮಟ್ಟಕ್ಕೆ ಆ ಸಂಘಟನೆಗಳು ಹೋಗಿವೆ. ಶಿವಮೊಗ್ಗದಲ್ಲಿ ಸಚಿವರೇ ಸೆಕ್ಷನ್ 144 ಉಲ್ಲಂಘಿಸಿ ಹಿಂಸೆಗೆ ಪ್ರಚೋದನೆ ನೀಡುತ್ತಾರೆ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಧರ್ಮ ಎಂದರೆ ಇದೇನಾ ಎಂದವರು ಪ್ರಶ್ನಿಸಿದರು.

Join Whatsapp