ನಂಜನಗೂಡು ದೇವಸ್ಥಾನ ತೆರವು | ಒತ್ತಡಕ್ಕೆ ಮಣಿದು ತಹಶೀಲ್ದಾರ್ ವರ್ಗಾವಣೆಗೊಳಿಸಿದ ಸರಕಾರ

Prasthutha|

► ಸ್ವ- ಎಡವಟ್ಟಿಗೆ ತಹಶೀಲ್ದಾರ್ ತಲೆದಂಡವಾಗಿಸಿತೇ ರಾಜ್ಯ ಬಿಜೆಪಿ ಸರಕಾರ?

- Advertisement -

ಮೈಸೂರು: ನಂಜನಗೂಡು ದೇವಾಲಯ ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರ ನಂಜನಗೂಡು ತಹಶೀಲ್ದಾರ್ ಮೋಹನ ಕುಮಾರಿ ಅವರನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ. ಆದರೆ ಸರಕಾರವು ತನ್ನಿಂದಾದ ಎಡವಟ್ಟಿಗೆ ತಹಶೀಲ್ದಾರ್ ರನ್ನು ತಲೆದಂಡ ಪಡೆದಿರುವುದು ತೀವ್ರ ಆಕ್ರೋಶಕ್ಕೂ ಕಾರಣವಾಗಿದೆ.

- Advertisement -


ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ರಶ್ಮಿ ಎಂ.ಎಸ್ ತಹಶೀಲ್ದಾರ್ ಮೋಹನ ಕುಮಾರಿ ಅವರನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದ್ದಾರೆ. ಅಲ್ಲದೇ ತಹಶೀಲ್ದಾರ್ ಹುದ್ದೆಯನ್ನು ಖಾಲಿ ಬಿಟ್ಟಿದ್ದು, ಹೊಸದಾಗಿ ನೇಮಕ ಗೊಳಿಸದೇ ಇರುವುದು ಗಮನಾರ್ಹವಾಗಿದೆ.


ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಉಚ್ಚಗಣಿ ಮಹದೇವಮ್ಮ ದೇವಾಲಯವನ್ನು ಇಲ್ಲಿನ ರಾಜ್ಯ ಬಿಜೆಪಿ ಸರಕಾರ ರಾತ್ರೋರಾತ್ರಿ ತೆರವು ಗೊಳಿಸಿದ್ದು ಜನಾಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಜನರ ಗಮನ ಬೇರೆಡೆ ಸೆಳೆಯಲು ಸರಕಾರ ತನ್ನ ತಪ್ಪಿಗೆ ತಹಶೀಲ್ದಾರ್ ರನ್ನೇ ಹೊಣೆಯಾಗಿಸಿದೆ ಎಂದು ಅಭಿಪ್ರಾಯ ವ್ಯಕ್ತವಾಗಿದೆ. ಮೋಹನ ಕುಮಾರಿ ಅವರನ್ನು ಐಎಂಎ ಪ್ರಕರಣದ ಸಕ್ಷಮ ಪ್ರಾಧಿಕಾರಕ್ಕೆ ವರ್ಗಾವಣೆ ಮಾಡಲಾಗಿದೆ.



Join Whatsapp