ಅಮೆರಿಕ ನಡೆಸಿದ ಸಾಮೂಹಿಕ ಜನಾಂಗೀಯ ಹತ್ಯೆಯೇ ತಾಲಿಬಾನ್ ಬೆಳೆಯಲು ಕಾರಣ

Prasthutha|

► ನಾಗರಿಕರನ್ನು ಕೊಲ್ಲುವ ರಕ್ತ ಪಿಪಾಸುತನವನ್ನು ಅಮೆರಿಕ ಕೊನೆವರೆಗೂ ಬಿಟ್ಟಿರಲಿಲ್ಲ

- Advertisement -


ಕಾಬೂಲ್:
9/11ರ ವಿಶ್ವ ವಾಣಿಜ್ಯ ಕೇಂದ್ರ ಧ್ವಂಸಗೊಂಡ ಬಳಿಕ ಅಮೆರಿಕ ಸಂಯುಕ್ತ ಸಂಸ್ಥಾನವು ಅಫ್ಘಾನಿಸ್ತಾನದಲ್ಲಿ ನಡೆಸಿದ ಜನರ ಸಾಮೂಹಿಕ ಜನಾಂಗೀಯ ಹತ್ಯೆಯೇ ತಾಲಿಬಾನಿಗರು ಸಮೂಹ ಬೆಂಬಲ ಪಡೆಯಲು ಕಾರಣವಾಯಿತು.
“ಪಾಶ್ಚಿಮಾತ್ಯರ ವಿರುದ್ಧ ಬಂದೂಕು ಎತ್ತಿರಿ” ಎಂಬ ಮಾತಿಗೆ ಯುಎಸ್ ಎ ನಡೆಸಿದ ಜನಾಂಗೀಯ ಹತ್ಯೆಯೇ ಪ್ರೇರಣೆಯಾಯಿತು.
20 ವರ್ಷಗಳ ಸೆಪ್ಟೆಂಬರ್ 11ರಂದು ಹಿಂದೆ ವಿದೇಶಿ ಯುಎಸ್ ಪಡೆಗಳು ಪಂಜ್ ವಾಯ್ ಜಿಲ್ಲೆಯ ಜಂಗಾಬಾದ್ ಗ್ರಾಮದಲ್ಲಿ ಗಂಡಸರನ್ನು ಸಾಲಾಗಿ ನಿಲ್ಲಿಸಿ ಗುಂಡಿಟ್ಟು ಕೊಂದುದನ್ನು ಇಲ್ಲಿನ ಅಳಿದುಳಿದ ಸಂಬಂಧಿಕರು ಈಗಲೂ ಮರೆತಿಲ್ಲ.
ಅವರ ಕೆಸರು ಮಣ್ಣಿನ ಗೋಡೆಯ ಮನೆಗಳು, ಬೆಳೆಸಿರುವ ದಾಳಿಂಬೆ ತೋಟಗಳು. ಅಲ್ಲಿಂದ ನುಗ್ಗಿ ಬಂದ ಯುಎಸ್ ಎಯ ಸಾರ್ಜೆಂಟ್ ರಾಬರ್ಟ್ ಬೇಲ್ ಮಾಡಿದ ಕೊಲೆಗಳು, ಹರಿಸಿದ ರಕ್ತ ಅಮಾನವೀಯ. ಒಂಬತ್ತು ಮಕ್ಕಳೂ ಸೇರಿ 16 ಜನರನ್ನು ಆತನು ಗುಂಡಿಟ್ಟು ಕೊಂದು ಹಾಕಿದ್ದ. 2001ರ ಅಮೆರಿಕದ ದುಃಖವು ಅರ್ಧ ಭೂಗೋಳದೀಚೆಯ ಸಾವಿರಾರು ಕುಟುಂಬಗಳನ್ನು ಪರೋಕ್ಷವಾಗಿ ಶೋಕಕ್ಕೆ ದೂಡಿತು. ಅಫ್ಘಾನಿ ಜನರಿಗೆ ವಿಮಾನಗಳು ವಾಣಿಜ್ಯ ಗೋಪುರಗಳಿಗೆ ಗುದ್ದಿದ್ದೂ ಗೊತ್ತಿರಲಿಲ್ಲ. ಆ ಜನರಿಗೆ ಅಲ್ ಖೈದಾ ಜೊತೆ ಸಂಬಂಧವೂ ಇರಲಿಲ್ಲ.


ಮಾರ್ಚ್ 11, 2012ರಲ್ಲಿ ಹಾಜಿ ಮುಹಮ್ಮದ್ ವಜೀರ್ ಅವರು ತನ್ನ 4 ವರ್ಷದ ಮಗನ ಸಮೇತ ಕುಟುಂಬದ ಎಲ್ಲರನ್ನು ಯುಎಸ್ ಹಿಂಸೆಗೆ ಕಳೆದುಕೊಂಡಿದ್ದರು. ಅಂದರೆ ವಾಣಿಜ್ಯ ಕಟ್ಟಡ ಬಿದ್ದ ಒಂದು ದಶಕದ ಬಳಿಕವೂ ಅಮೆರಿಕ ತನ್ನ ರಕ್ತ ಪಿಪಾಸುತನ ಬಿಟ್ಟಿರಲಿಲ್ಲ. ಹಾಜಿಯವರ ಮಡದಿ, ನಾಲ್ವರು ಗಂಡು ಮಕ್ಕಳು, ನಾಲ್ವರು ಹೆಣ್ಣು ಮಕ್ಕಳು ಹಾಗೂ ಇಬ್ಬರು ಸಂಬಂಧಿಕರನ್ನು ಸಾರ್ಜೆಂಟ್ ಬೇಲ್ಸ್ ಬಾಗಿಲಿಗೇ ಬಂದು ಗುಂಡಿಟ್ಟು ಕೊಂದಿದ್ದ. ಇದು ನನಗೆ ಈಗಲೂ ಕೆಟ್ಟ ಕನಸು, ಕೊನೆಗೂ ಅಮೆರಿಕನ್ನರು ಇಲ್ಲಿಂದ ಓಡಬೇಕಾಯಿತು ಎನ್ನುವುದು ಸಂತಸಕರ, ಅಲ್ಲಾಹನಿಗೆ ವಂದನೆ ಎನ್ನುತ್ತಾರೆ ವಜೀರ್. ಅಮೆರಿಕನ್ನರು ಯುದ್ಧಕ್ಕಿಂತ ಹೆಚ್ಚಾಗಿ ನಾಗರಿಕರನ್ನು ಕೊಂದು ಹಾಕಿದ್ದಾರೆ. ಕಾರಣವಿಲ್ಲದೆ ಮಕ್ಕಳು ಮತ್ತು ಹೆಂಗಸರನ್ನು ಮನೆ ಮನೆಗೆ ಬಂದು ಕೊಂದಿದ್ದಾರೆ.

- Advertisement -


“ಒಂದು ದಶಕದಲ್ಲಿ ನಾವು 49 ಜನ ಸಂಬಂಧಿಕರನ್ನು ಕಳೆದುಕೊಂಡಿದ್ದೇವೆ. ಇಂಥ ಜನಾಂಗೀಯ ಹತ್ಯೆಗಳು ಅಫ್ಘಾನಿಸ್ತಾನದ ಎಲ್ಲ ಕಡೆ ನಡೆದಿದೆ. ಅದು ತಾಲಿಬಾನಿಗರಿಗೆ ಎಲ್ಲ ಕಡೆ ಬೆಂಬಲ ದೊರೆಯಲು ಕಾರಣವಾಗಿದೆ” ಎಂದು ಜಂಗಾಬಾದ್ ನವರು ಹೇಳುತ್ತಾರೆ
ನಾನು ಉಳಿದ ಒಬ್ಬನೇ ಒಬ್ಬ ಮಗನನ್ನು ನೋಡಿಕೊಳ್ಳಬೇಕಾಯಿತು. ಹಾಗಾಗಿ ಯುದ್ಧಕ್ಕೆ ಹೋಗಿಲ್ಲ ಎನ್ನುತ್ತಾರೆ ವಜೀರ್. ಪಂಜ್ ವಾಯ್ ಜಿಲ್ಲೆಯ ತಾಲಿಬಾನ್ ಕಮಾಂಡರ್ ಫೈಜನಿ ಮಾವ್ಲವಿ ಸಾಹಬ್ ಅವರು ಇಂಥ ಜನಾಂಗೀಯ ಕೊಲೆಗಳು ನಮ್ಮ ಸೇನೆಗೆ ಜನರೇ ಬಂದು ಸೇರುವಂತೆ ಮಾಡಿತು, ಜನರೆಲ್ಲ ನಮ್ಮನ್ನು ಪೂರ್ಣ ಬೆಂಬಲಿಸತೊಡಗಿದರು ಎಂದು ತಾಲಿಬಾನ್ ಬಲಿಷ್ಠಗೊಂಡ ಬಗ್ಗೆ ವಿವರ ನೀಡುತ್ತಾರೆ.


ತಾಲಿಬಾನಿಗರು ಮೊದಲು ಆಳಿದ ಕಂದಹಾರ್ ಬಳಿಯ ಒಂದು ಸಣ್ಣ ಊರಿನಲ್ಲಿ ಮುಲ್ಲಾ ಮುಹಮ್ಮದ್ ಉಮರ್ ತಾಲಿಬಾನ್ ಕಟ್ಟಿದರು. ಇಲ್ಲಿ ಒಸಾಮಾ ಬಿನ್ ಲಾಡೆನ್ ಬಂದಿದ್ದರು. ತಾಲಿಬಾನ್ ನ ಸ್ಥಾಪಕ ಸದಸ್ಯರೆಲ್ಲ ಕಂದಹಾರ್ ಪ್ರದೇಶದವರು. ಇಲ್ಲಿನ ತೋಟ ಮತ್ತು ಗದ್ದೆಗಳೇ ತಾಲಿಬಾನಿಗರ ನೆಲೆಯಾಯಿತು. ಹಾಗಾಗಿ ಅಮೆರಿಕನ್ನರು ತಮ್ಮ ದಾಳಿಯನ್ನು ಬಹುವಾಗಿ ಇತ್ತ ಕೇಂದ್ರೀಕರಿಸಿದ್ದರು.

2001ರಲ್ಲಿ ತಾಲಿಬಾನಿಗರು ಅಧ್ಯಕ್ಷ ಹಮೀದ್ ಕರ್ಜಾಯ್ ಮುಂದೆ ಶರಣಾಗಲು ಬಯಸಿದ್ದರು. ಆದರೆ ಬಿನ್ ಲಾಡೆನ್ ಬೇಟೆಯಾಡುವ ಹುಮ್ಮಸ್ಸಿನಲ್ಲಿದ್ದ ಅಮೆರಿಕದ ಪಡೆ ಇದಕ್ಕೆ ಅವಕಾಶ ಕೊಡಲಿಲ್ಲ. ಯುಎಸ್ ಎ ದ್ವೇಷವು ತಾಲಿಬಾನ್ ಗೆ ವರವಾಯಿತು. ಶರಣಾಗುವವರ ಬಗೆಗೆ ಕಿವಿಗೊಡದ, ಮಾತನಾಡದ ಯುಎಸ್ ನ ರಕ್ಷಣಾ ಕಾರ್ಯದರ್ಶಿ (ಮಂತ್ರಿ) ಡೊನಾಲ್ಡ್ ರಮ್ಸ್ ಪೆಲ್ಡ್ ಅವರು ಮುಂದಿನ ಎರಡು ದಶಕಗಳಲ್ಲಿ ಇಲ್ಲಿ ಕೊಲ್ಲಲಿರುವ ಅಫ್ಘಾನಿಗಳ ಮೂಲಕವೇ ನಾವು ವ್ಯಯಿಸುವ ಹಣ ಮರು ಸಂಗ್ರಹಿಸಬೇಕು ಎಂದಿದ್ದರು.


ಯುಎಸ್ ಅಧ್ಯಕ್ಷರಾಗಿ ಎಂಟು ವರ್ಷಗಳ ಕಾಲ ಜಾರ್ಜ್ ಡಬ್ಲ್ಯು. ಬುಶ್ ಇದ್ದಾಗ ರಮ್ಸ್ ಪೆಲ್ಡ್ ಅಫ್ಘಾನಿಸ್ತಾನದಲ್ಲಿ ನಡೆಸಿದ ಆಡಳಿತವು ಮುಲ್ಲಾ ಉಮರ್ ಮತ್ತು ಬಿನ್ ಲಾಡೆನ್ ಹೆಚ್ಚು ಬಾಳುವುದಿಲ್ಲ ಎಂದು ತಿಳಿದರು. ತಾಲಿಬಾನಿಗರ ಮಹಿಳಾ ಶಿಕ್ಷಣ ವಿರೋಧಿ ನೀತಿ, ಚಾಟಿ ಶಿಕ್ಷೆ ಮುಂತಾದ ಕಾರಣದಿಂದ ತಾಲಿಬಾನಿಗರು ಜನ ಬೆಂಬಲ ಗಳಿಸುವರು ಎಂದು ಅಮೆರಿಕದ ಅಧಿಕಾರಿಗಳು ಕನಸಿನಲ್ಲಿ ಕೂಡ ಎಣಿಸಿರಲಿಲ್ಲ.


2001ರಲ್ಲಿ ಬಂಡಾಯ ಇನ್ನಿಲ್ಲ, ತಾಲಿಬಾನಿಗರು ಸೋತರು. ಶಾಂತಿಗೆ ಅವಕಾಶ ಇತ್ತು. ಆದರೆ ಅಮೆರಿಕ ಹಾಗೂ ಅಫ್ಘಾನಿಸ್ತಾನದ ಅವರ ಬೆಂಬಲದ ಸರಕಾರವು ಬುಡಕಟ್ಟು ಬಂಡಾಯಗಾರರು, ತಾಲಿಬಾನಿಗರು ಇನ್ನು ತಲೆಯೆತ್ತುವುದೇ ಸಾಧ್ಯವಿಲ್ಲ ಎನ್ನುವಂತೆ ವರ್ತಿಸಿದರು ಎಂದು ಅಪ್ಘಾನಿಸ್ತಾನದ ವಿಶ್ಲೇಷಣೆಯ ಕೇಟ್ ಕ್ಲರ್ಕ್ ಹೇಳುತ್ತಾರೆ. ವಿದೇಶೀಯರು ಬುಡ ಭದ್ರ ಮಾಡಿಕೊಳ್ಳಲು ನೋಡಿದಂತೆ ತಾಲಿಬಾನ್ ಜನ ಕಣಿವೆಗಳಲ್ಲಿ ತುಂಬತೊಡಗಿದರು, ಹೆಚ್ಚೆಚ್ಚು ನಾಗರಿಕರು ಅವರ ಪಡೆ ಸೇರತೊಡಗಿದರು.
ಜಂಗಾಬಾದ್ ನ ಇನ್ನೊಬ್ಬ ನಿವಾಸಿ ಹಸ್ತಿ ಮುಹಮ್ಮದ್ ಅವರು 2006ರಲ್ಲಿ ತನ್ನ 18 ಜನ ಬಂಧುಗಳನ್ನು ಕಳೆದುಕೊಂಡರು. ಅವರು ಕೆನಡಾದ ಮಿತ್ರ ಪಡೆ ನಡೆಸಿದ ಮೆದುಸಾ ಆಪರೇಶನ್ ಕಾರಣ ಈ ಪ್ರದೇಶ ಬಿಟ್ಟು ಓಡಬೇಕಾಯಿತು.


ಹಸ್ತಿ ಬಂಡಾಯ ಗುಂಪು ಸೇರಿದರು. ಮರಗಳ ಮರೆಯ ಟೆಂಟ್ ಗಳಲ್ಲಿ ವಾಸ. ಆದರೆ ಮಿತ್ರ ಪಡೆಗಳ ವಾಯು ದಾಳಿಗಳಿಂದಾಗಿ ಅವು ಸುರಕ್ಷಿತವಾಗಿರಲಿಲ್ಲ. ಇಲ್ಲಿ ನ್ಯಾಟೋ ಪಡೆಗಳು ದಾಳಿ ನಡೆಸಿ 30 ಜನ ನಾಗರಿಕರನ್ನು ಕೊಂದವು, ಅಷ್ಟೇ ಜನ ತಾಲಿಬಾನ್ ಸೈನಿಕರು ಹುತಾತ್ಮರಾದರು. ಈ ವಾಯು ದಾಳಿಯಲ್ಲಿ ಸರ್ದಾರ್ ಮುಹಮ್ಮದರು ತನ್ನ 14 ಜನ ಸಂಬಂಧಿಕರನ್ನು ಕಳೆದುಕೊಂಡು ಒಂಟಿಯಾಗಿದ್ದಾರೆ. ಈ ಕೆನಡಾ ತುಕಡಿ 2011ರಲ್ಲಿ ಅಲ್ಲಿನ ಜವಾಬ್ದಾರಿಯನ್ನು ಅಮೆರಿಕದವರಿಗೆ ವಹಿಸುವ ಮೊದಲು ಜಂಗಾಬೂಮ್ ಎಂಬ ಅಡ್ಡ ಹೆಸರನ್ನು ಪಡೆದಿತ್ತು.


ಸಾರ್ಜೆಂಟ್ ಬೇಲ್ಸ್ ಮರು ವರುಷ ಮತ್ತೆ ಮನೆಗಳತ್ತ ಬಂದ. ಲಾಲ್ ಮುಹಮ್ಮದರ ಕುಟುಂಬದ ಐವರು ಮಕ್ಕಳನ್ನು ಮನೆಯೆದುರು ಆಟವಾಡುವಾಗ ಕೊಂದು ಹಾಕಿದ. ದೊಡ್ಡವನಿಗೆ ಹನ್ನೆರಡು ಮತ್ತು ಸಣ್ಣವನಿಗೆ ಆರು ವರುಷ. ಇದರ ಬೆನ್ನಿಗೆ ಲಾಲ್ ಮುಹಮ್ಮದನನ್ನು ಬಂಧಿಸಿ ಕಾಬೂಲ್ ಬಳಿಯ ಬಗ್ರಾಮ್ ವಾಯು ನೆಲೆಯ ಜೈಲಿಗೆ ಕಳುಹಿಸಿದರು. ಆರು ವರ್ಷಗಳ ಕಳೆದ ತಿಂಗಳು ತಾಲಿಬಾನಿಗರ ದಾಳಿಯ ವೇಳೆ ಅವರೆಲ್ಲ ಜೈಲು ಮುರಿದು ಹೊರ ಬರುವುದು ಸಾಧ್ಯವಾಯಿತು.


“ನಾನಾಗಲಿ, ನನ್ನ ಕುಟುಂಬವಾಗಲಿ ತಾಲಿಬಾನಿಗರಲ್ಲ. ಆದರೆ ಇದೆಲ್ಲ ಆದ ಮೇಲೆ ನಮ್ಮವರೆಲ್ಲ ತಾಲಿಬಾನ್ ಪಡೆ ಸೇರಿದರು. ನಮ್ಮವರನ್ನು ಕೊಂದವರನ್ನು ಹಣಿಯಲು ತಾಲಿಬಾನ್ ಸೇರದೆ ನಮಗೆ ಬೇರೆ ಮಾರ್ಗವೇ ಇರಲಿಲ್ಲ ಎನ್ನುತ್ತಾರವರು.
ಹೀಗೆ ತಾಲಿಬಾನ್ ಬಲಿಷ್ಠಗೊಳ್ಳಲು ಅಮೆರಿಕದ ಪೈಶಾಚಿಕತೆಯೇ ಕಾರಣ ಎಂದು ಈಗ ಬಹಿರಂಗಗೊಂಡಿದೆ.

Join Whatsapp