ಇಂದು ಕಾಂಗ್ರೆಸ್ ಸೇರ್ಪಡೆಗೊಳ್ಳಲಿರುವ ಜಿಗ್ನೇಶ್ ಮೆವಾನಿ, ಕನ್ನಯ್ಯಾ ಕುಮಾರ್

Prasthutha|

ನವದೆಹಲಿ: ಕಳೆದ ಕೆಲವೊಂದು ದಿನಗಳಿಂದ ನಡೆಯುತ್ತಿರುವ ಜಿಗ್ನೇಶ್ ಮೆವಾನಿ, ಕನ್ನಯ್ಯಾ ಕುಮಾರ್ ಕಾಂಗ್ರೆಸ್ ಸೇರ್ಪಡೆ ಊಹಾಪೋಹಕ್ಕೆ ಇಂದು ಅಂತಿಮ ತೆರೆ ಬೀಳಲಿದೆ. ಇಬ್ಬರು ಯುವ ನಾಯಕರು ಇಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಮ್ಮುಖದಲ್ಲಿ ಮದ್ಯಾಹ್ನ 3ಗಂಟೆಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

- Advertisement -

ಪ್ರಸ್ತುತ ಗುಜರಾತ್ ನ ವಡಂಗಾವ್ ಕ್ಷೇತ್ರದ ಪಕ್ಷೇತರ ಶಾಸಕರಾಗಿರುವ ಜಿಗ್ನೇಶ್ ಮೆವಾನಿ ಮತ್ತು ಸಿಪಿಐಎಂ ಯುವ ಮುಖಂಡ ಕನ್ನಯ್ಯ ಕುಮಾರ್ ಕಳೆದ ವಾರಗಳಿಂದ ಕಾಂಗ್ರೆಸ್ ಸೇರ್ಪಡೆಯಾಗುವ ಬಗ್ಗೆ ಚರ್ಚೆ ನಡೆಯುತ್ತಲೇ ಇತ್ತು. ಮುಂಬರುವ ಗುಜರಾತ್ ವಿಧಾನ ಸಭಾ ಚುನಾವಣೆಗೆ ಪಕ್ಷ ಬಲವರ್ಧಿಸುವ ಸಲುವಾಗಿ ಇಬ್ಬರು ಯುವ ನಾಯಕರನ್ನು ಪಕ್ಷಕ್ಕೆ ಬರಮಾಡಿಕೊಂಡಿದೆ ಎಂದು ಹೇಳಲಾಗಿದೆ

Join Whatsapp