ಶಾಲೆಗಳಿಗೆ ಪಠ್ಯಪುಸ್ತಕಗಳನ್ನು ಪೂರೈಸದೆ ಮಕ್ಕಳ ಶೈಕ್ಷಣಿಕ ಭವಿಷ್ಯದೊಂದಿಗೆ ಸರ್ಕಾರ ಚೆಲ್ಲಾಟವಾಡುತ್ತಿದೆ: ಜಮಾಅತೆ ಇಸ್ಲಾಮೀ ಹಿಂದ್ ಆರೋಪ

Prasthutha|

ಬೆಂಗಳೂರು: ರಾಜ್ಯದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಆರಂಭಗೊಂಡು ಈಗಾಗಲೆ 90 ದಿನಗಳು ಗತಿಸಿವೆ. ಸರ್ಕಾರ ಪಠ್ಯಪುಸ್ತಕಗಳನ್ನು ಶಾಲೆಗಳಿಗೆ ಪೂರೈಸದೆ ಮಕ್ಕಳ ಶೈಕ್ಷಣಿಕ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿದೆ ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ಇದರ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಅಸ್ಲಮ್ ಆರೋಪಿಸಿದ್ದಾರೆ.

- Advertisement -

ಇಂದು ಪತ್ರಿಕಾ ಹೇಳಿಕೆ ಬಿಡುಗಡೆಗೊಳಿಸಿರುವ ಅವರು ಪಠ್ಯಪುಸ್ತಕ ಪರಿಷ್ಕರಣೆ ಎಂಬ ಪ್ರಹಸನವು ಗೊಂದಲದ ಗೂಡಾಗಿದ್ದು, ಅನರ್ಹ ವ್ಯಕ್ತಿಗಳು ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಹೊಣೆಗಾರಿಕೆಯನ್ನು ಹೊತ್ತು ಮಕ್ಕಳ ಮಾನಸಿಕತೆಯನ್ನು ಅರಿಯದೆ ಅವೈಜ್ಞಾನಿಕ ರೀತಿಯಲ್ಲಿ ಪಠ್ಯಪುಸ್ತಕಗಳ ಮೂಲಕ ಮೂಢನಂಬಿಕೆಗಳನ್ನು ಹೇರಲು ಪ್ರಯತ್ನಿಸುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ನಿಟ್ಟಿನಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕ ಘಟಕದ ಶೈಕ್ಷಣಿಕ ವಿಭಾಗವು ರಾಜ್ಯದ ಶಿಕ್ಷಣ ಇಲಾಖೆಯಲ್ಲಿ ನಡೆಯುತ್ತಿರುವ ಬೆಳೆವಣೆಗೆಗಳ ಕುರಿತಂತೆ ಗಂಭೀರವಾಗಿ ಚಿಂತನೆ ನಡೆಸಿದ್ದು, ಕೂಡಲೇ ಪಠ್ಯಪುಸ್ತಕ ಪರಿಷ್ಕರಣ ಸಮಿತಿಯನ್ನು ರದ್ದುಗೊಳಿಸಿ ಈ ಹಿಂದೆ ಇದ್ದಂತಹ ಪಠ್ಯಪುಸ್ತಕಗಳನ್ನು ರಾಜ್ಯದ ಎಲ್ಲ ಶಾಲೆಗಳಿಗೆ ಪೂರೈಸಬೇಕೆಂದು ಅವರು ಈ ಮೂಲಕ ಸರ್ಕಾರವನ್ನು ಆಗ್ರಹಿಸಿದ್ದಾರೆ.

- Advertisement -

ಪಠ್ಯಪುಸ್ತಕಗಳು ಒಂದು ಪೀಳಿಗೆಯನ್ನೇ ರೂಪಿಸುತ್ತವೆ. ಸದ್ಯ ರಾಜ್ಯದ ಶಿಕ್ಷಣ ಇಲಾಖೆಯಲ್ಲಿ ನ ಬೆಳವಣೆಗಗಳು ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪಾಲಕರನ್ನು ಆತಂಕಕ್ಕೆ ದೂಡಿದ್ದು ಮಕ್ಕಳ ಮನಸ್ಸಿನಲ್ಲಿ ಕೊಳಕು ತುಂಬುವಂತಹ ಪ್ರಯತ್ನಗಳಿಂದಾಗಿ ಮುಂದಿನ ಪೀಳಿಗೆಯು ಯಾವ ರೀತಿ ದೇಶ ಮತ್ತು ಸಮಾಜವನ್ನು ರಕ್ಷಿಸಬಲ್ಲದು ಎಂಬ ಭಯವನ್ನು
ಹುಟ್ಟುವಂತೆ ಮಾಡಿದೆ ಎಂದು ಅವರು ಆತಂಕವನ್ನು ವ್ಯಕ್ತಪಡಿಸಿದ್ದಾರೆ.

ಪಠ್ಯಪುಸ್ತಕಗಳು ಸ್ವಾತಂತ್ರ್ಯ ತೆ ಸಮಾನತೆ, ಭ್ರಾತೃತ್ವ, ನಂಬಿಕೆ, ಪರಸ್ಪರ ಗೌರವ, ಮಾನವ ಹಕ್ಕುಗಳು, ಮಕ್ಕಳ ಹಕ್ಕುಗಳು, ಮಾನವೀಯ ಮೌಲ್ಯಗಳು ಒಟ್ಟಾರೆಯಾಗಿ ಬಹುತ್ವ ಭಾರತದ ಕಲ್ಪನೆ ಹೇಗಿರಬೇಕು, ಬಹುತ್ವದದೊಂದಿಗೆ ನಾವು ಹೇಗೆ ಬದುಕಬೇಕು ಎಂಬ ವಿಷಯಗಳನ್ನು ಮಕ್ಕಳ ಮನಸ್ಸಿನಲ್ಲಿ ಬಿತ್ತುವಂತ ಪ್ರಯತ್ನಗಳು ಪಠ್ಯಪುಸ್ತಕಗಳಿಂದಾಗಬೇಕು. ಆದರೆ ಸದ್ಯದ ರಾಜ್ಯದಲ್ಲಿ ಉಂಟಾಗುತ್ತಿರುವ ಬೆಳವಣೆಗೆಯನ್ನು ಕಂಡರೆ, ಮೇಲೆ ತಿಳಿಸಿದ ಮೌಲ್ಯಗಳ ಕಡೆಗೆ ಒತ್ತು ನೀಡದೇ, ಬಲಪಂಥೀಯ, ಕೋಮುದ್ವೇಷ, ಸಮಾಜ ಒಡೆಯುವ ಮತ್ತು ಪರಸ್ಪರಲ್ಲಿ ಅಪನಂಬಿಕೆ ಮೂಡಿಸುವ ವಿಷಯಗಳು ಪಠ್ಯಪುಸ್ತಕಗಳಲ್ಲಿ ಸೇರ್ಪಡೆಗೊಳ್ಳುತ್ತಿರುವುದು ದೇಶದ ಭವಿಷ್ಯ ಅಂಧಕಾರದೆಡೆಗೆ ಸಾಗುತ್ತಿರುವ ದ್ಯೋತಕವಾಗಿ ಕಂಡುಬರುತ್ತಿದೆ ಎಂದು ಕಿಡಿಕಾರಿದ್ದಾರೆ.

ಈ ಎಲ್ಲ ವಿಷಯಗಳನ್ನು ಕಾರಣವಾಗಿಟ್ಟುಕೊಂಡು ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕ ಘಟಕದ ಶಿಕ್ಷಣ ವಿಭಾಗವು ರಾಜ್ಯ ಸರ್ಕಾರಕ್ಕೆ ಆಗ್ರಹಿಸುವುದೇನಂದರೆ, ಕೂಡಲೇ ಪಠ್ಯಪುಸ್ತಕ ಪರಿಷ್ಕರಣೆಯನ್ನು ಕೈಬಿಟ್ಟು ಈ ಹಿಂದೇ ಇದ್ದ ಪಠ್ಯಗಳನ್ನೇ ಯಥಾವತ್ತಾಗಿ ಮುದ್ರಿಸಿ ಕೂಡಲೆ ಶಾಲೆಗಳಿಗೆ ಪೂರೈಸಬೇಕಾಗಿ ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.

Join Whatsapp