ಮಂಗಳೂರು: ನಗರದ ರಾವ್ & ರಾವ್ ಸರ್ಕಲ್ ಪರಿಸರದಲ್ಲಿ ಪೋಲಿಸ್ ಇಲಾಖೆಯು ಮಾಡಿದ ವಾಹನ ಸಂಚಾರದ ಮಾರ್ಪಾಡಿನಿಂದ ಸ್ಥಳೀಯ ವ್ಯಾಪಾರಿಗಳು ವ್ಯಾಪಾರವನ್ನು ಕಳೆದುಕೊಂಡಿದ್ದಾರೆ. ಈ ಹಿನ್ನಲೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿ’ಸೋಜರವರ ನೇತೃತ್ವದ ವ್ಯಾಪಾರಿಗಳ ಒಕ್ಕೂಟವು ಮಹಾನಗರ ಪಾಲಿಕೆ ಆಯುಕ್ತರನ್ನು ಭೇಟಿ ಮಾಡಿ ಸಮಸ್ಯೆಗಳ ಪರಿಹಾರಕ್ಕಾಗಿ ಚರ್ಚೆ ನಡೆಸಿತು.
ಸಿಟಿ ಬಸ್ ನಿಲ್ದಾಣ ಸ್ಥಳಾಂತರದಿಂದ ಸುಮಾರು 480 ಅಂಗಡಿ ವ್ಯಾಪಾರಸ್ತರಿಗೆ ಶೇ.90ರಷ್ಟು ವ್ಯಾಪಾರ ಕಡಿತವಾಗಿದೆ. ಹಾಗಾಗಿ ವ್ಯಾಪಾರಿಗಳ ಮತ್ತು ಜನರ ಹಿತದೃಷ್ಟಿಯಿಂದ ಸೂಕ್ತ ಕ್ರಮ ಕೈಗೊಳ್ಳಲು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷರಾದ ಜಯಶೆಟ್ಟಿ ಎಕ್ಕೂರು, ಉಪಾಧ್ಯಕ್ಷ ಮಹಮ್ಮದ್ ಇಕ್ಬಾಲ್, ಶಾಕಿರ್, ನಾಗರಾಜ್, ಮಹಮ್ಮದ್ ಮೆಡಿಕಲ್, ರಘುನಾಯಕ್, ಅಮಿದ್‌ಷಾ ಮತ್ತಿತರರು ಉಪಸ್ಥಿತರಿದ್ದರು.